ರಾಯಚೂರು:- ಜಿಲ್ಲೆ ಲಿಂಗಸೂರು ತಾಲೂಕಿನ ಹಟ್ಟಿ ಚಿನ್ನದ ಗಣಿಯಲ್ಲಿ ಕರೆಂಟ್ ವೈಯರ್ ತುಳಿದು 19 ವರ್ಷದ ಯುವಕ ಸಾವನ್ನಪ್ಪಿರುವ ಘಟನೆ ಜರುಗಿದೆ.
ಅಂಬರೀಶ್ ಮೃತ ಯುವಕ. ಹಟ್ಟಿ ಚಿನ್ನದ ಗಣಿ ಅಧಿಕಾರಿಗಳ ನಿರ್ಲಕ್ಷ್ಯವೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಡೆಮಾಲಿಷನ್ ಮಾಡಿರುವ ಕಾರ್ಮಿಕರ ಮನೆಗಳಲ್ಲಿ ಕರೆಂಟ್ ಡಿಸ್ಕನೆಟ್ ಮಾಡದ ಕಾರಣ ಅಮಾಯಕ ಜೀವ ಬಲಿಯಾಗಿದೆ. ಅಲ್ಲಿದ್ದ ಪ್ಲಾಸ್ಟಿಕ್ ಸೇರಿದಂತೆ ಗುಜರಿ ಸಾಮಾನುಗಳನ್ನು ತೆಗೆದುಕೊಳ್ಳಲು ಬಂದಿದ್ದ ವೇಳೆ ಕರೆಂಟ್ ವೈರ್ ತುಳಿದು 19 ವರ್ಷದ ಅಂಬರೀಶ್ ಸಾವನ್ನಪ್ಪಿದ್ದಾನೆ. ಕರೆಂಟ್ ಡಿಸ್ ಕನೆಕ್ಟ್ ಮಾಡದೆ ಹಾಗೆ ಬಿಟ್ಟಿರುವ ಕಂಪನಿಯ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿರ್ಲಕ್ಷ ವಹಿಸಿರುವ ಕಂಪನಿಯ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿ ಯುವಕನ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಸ್ಥಳೀಯರು ಪಟ್ಟು ಹಿಡಿದಿದ್ದಾರೆ.



