HomeEntertainmentದರ್ಶನ್‌ ಹೆಸರನ್ನು ವಾಮನ ಸಿನಿಮಾದ ಪ್ರಚಾರಕ್ಕೆ ಬಳಸಿಕೊಂಡ್ರಾ ಧನ್ವೀರ್?‌

ದರ್ಶನ್‌ ಹೆಸರನ್ನು ವಾಮನ ಸಿನಿಮಾದ ಪ್ರಚಾರಕ್ಕೆ ಬಳಸಿಕೊಂಡ್ರಾ ಧನ್ವೀರ್?‌

For Dai;y Updates Join Our whatsapp Group

Spread the love

ರೇಣುಕಾಸ್ವಾಮಿ ಕೊಲೆ ಕೇಸ್‌ ನಲ್ಲಿ ನಟ ದರ್ಶನ್‌ ಜೈಲು ಸೇರಿದ ವೇಳೆ ಹಲವರು ಅವರನ್ನು ನೋಡುವ ಪ್ರಯತ್ನವನ್ನು ಮಾಡಲಿಲ್ಲ. ದರ್ಶನ್‌ ರ ಕೆಲವೇ ಕೆಲವು ಅಪ್ತರು ಮಾತ್ರವೇ ದರ್ಶನ್‌ ಅವರ ಬೆಂಬಲಕ್ಕೆ ನಿಂತಿದ್ದರು. ಅದರಲ್ಲಿ ನಟ ಧ್ವನೀರ್‌ ಕೂಡ ಒಬ್ಬರು. ದರ್ಶನ್‌ ಜೈಲು ಸೇರಿದ ದಿನದಿಂದಲೂ ಹೊರ ಬರುವವರೆಗೂ ದರ್ಶನ್‌ ಜೊತೆ ಧನ್ವೀರ್‌ ನಿಂತಿದ್ದರು.  ಈ ಬಗ್ಗೆ ಕೆಲವರು ನೆಗೆಟಿವ್‌ ಆಗ ಮಾತನಾಡೋಕೆ ಶುರು ಮಾಡಿದ್ದರು. ಈ ಬಗ್ಗೆ ಧ್ವೀರ್‌ ಖಡಕ್‌ ಆಗಿ ಉತ್ತರಿಸಿದ್ದಾರೆ.

ಧನ್ವೀರ್‌ ನಟನೆಯ ʻವಾಮನʼ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಇತ್ತೀಚೆಗೆ ಸೋಷಿಯಲ್‌ ಮೀಡಿಯಾ ಮೂಲಕ ವಾಮನ ಸಿನಿಮಾದ ಟ್ರೈಲರ್‌ ಬಗ್ಗೆ ಮಾತನಾಡಿದ್ದ ದರ್ಶನ್‌ ವಾಮನ ಸಿನಿಮಾ ನೋಡಿ ಸಪೋರ್ಟ್‌ ಮಾಡುವಂತೆ ಕೇಳಿ ಕೊಂಡಿದ್ದರು. ಸದ್ಯ ನಟ ಧನ್ವೀರ್‌ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದು  ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದಾರೆ. ಈ ವೇಳೆ, ದರ್ಶನ್‌ ಅವರ ಹೆಸರು ಬಳಸಿಕೊಳ್ಳುತ್ತಿದ್ದೀರಾ ಎಂದು ಅನೇಕರು ಮಾತನಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.

“ಮಾತನಾಡುವವರು ಸಾವಿರ ಮಾತನಾಡುತ್ತಾರೆ, ನಾನು ತಲೆ ಕೆಡಿಸಿಕೊಳ್ಳಲ್ಲ. ಸತ್ಯ ಏನು ಅನ್ನೋದು ಅವರಿಗೆ ಗೊತ್ತಲ್ವಾ ಅಷ್ಟು ಸಾಕು ಎಲ್ಲರನ್ನೂ ಮೆಚ್ಚಿಸುವ ಅವಶ್ಯಕತೆ ಇಲ್ಲ. ನಾನು ಮಾಡಿರೋದ್ರಲ್ಲಿ ನನಗೆ ತೃಪ್ತಿ ಇದೆ. ಎಂಥಾ ಸ್ಥಿತಿಗೆ ಹೋದ್ರು ನಮ್ಮಣ್ಣನನ್ನು ನಾವು ಹೊರಗೆ ಕರೆದುಕೊಂಡು ಬಂದ್ವಿ ಅನ್ನೋ ಖುಷಿಯಿದೆ” ಎಂದಿದ್ದಾರೆ ಧನ್ವೀರ್.

“ಇವತ್ತಿನ ದಿನದವರೆಗೂ ನಮ್ಮ ಮನೆಯಲ್ಲಿ ನಮ್ಮ ತಂದೆ ತಾಯಿಯೂ ಈ ಬಗ್ಗೆ ಕೇಳಿದವರಲ್ಲಾ. ಆ ಮನುಷ್ಯ ನಮಗೆ ತುಂಬಾ ಸಪೋರ್ಟ್‌ ಮಾಡಿದ್ದಾರೆ. ಅವರು ಸುಖದಲ್ಲಿ ಇದ್ದಾಗ ಅವರ ಜೊತೆಗಿದ್ದು ಎಲ್ಲಾ ಮಾಡಿ, ಕಷ್ಟ ಅಂತ ಬಂದಾಗ ಅವರು ಯಾರು ಅಂತ ಗೊತ್ತೇ ಇಲ್ಲ ಅನ್ನೋ ಹಾಗೆ ಇರೋದು ಎಷ್ಟು ಸರಿ. ಇವತ್ತು ಇವರಿಗೆ ನಾಳೆ ಇನ್ನೊಬ್ಬರಿಗೆ ಆ ಕಷ್ಟ ಬಂದಾಗ ಗೊತ್ತಾಗುತ್ತೆ”

ಧನ್ವೀರ್‌ ಮತ್ತು ರೀಷ್ಮಾ ನಾಣಯ್ಯ ನಟನೆಯ ʻವಾಮನʼ ಸಿನಿಮಾ ರಾಜ್ಯಾದ್ಯಂತ ಏಪ್ರಿಲ್‌ 10ಕ್ಕೆ ರಿಲೀಸ್‌ ಆಗುತ್ತಿದೆ.‌ ಪಕ್ಕಾ ಆಕ್ಷನ್‌ ಸಿನಿಮಾವಾಗಿರುವ ವಾಮನ ಟ್ರೈಲರ್‌ ಮೂಲಕವೇ ಕುತೂಹಲ ಮೂಡಿಸಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!