ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಅಂಜುಮನ್ ಇಸ್ಲಾಂ ಶಿಕ್ಷಣ ಸಂಸ್ಥೆಯ ಕರ್ನಾಟಕ ಪದವಿಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜು ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಶೇ.81.66 ಮತ್ತು ವಾಣಿಜ್ಯ ವಿಭಾಗದಲ್ಲಿ ಶೇ.96ರಷ್ಟು ಫಲಿತಾಂಶ ಬಂದಿದ್ದು, ಕಾಲೇಜಿನ ಫಲಿತಾಂಶ ಶೇ.73ರಷ್ಟಾಗಿದೆ.
ವಿಜ್ಞಾನ ವಿಭಾಗದಲ್ಲಿ ಸ್ಪೂರ್ತಿ ಮಡಿವಾಳರ ಪ್ರಥಮ (ಶೇ.81.66), ಸಾಗರ ಗೋಲಪ್ಪನವರ ದ್ವಿತೀಯ (ಶೇ.78.16), ಮುಬೀನತಾಜ್ ಚಿಕೇನಕೊಪ್ಪ ತೃತೀಯ ಸ್ಥಾನ (ಶೇ. 68.16) ಫಲಿತಾಂಶ ದಾಖಲಿಸಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಸಂಬ್ರೀನ್ ಕಡಡಕೋಳ ಪ್ರಥಮ (ಶೇ. 96), ಸನಾ ಮುಲ್ಲಾ ದ್ವಿತೀಯ (ಶೇ. 72.83) ಬೀಬಿ ಅಮೀನಾ ಮುಲ್ಲಾ ತೃತೀಯ (ಶೇ.68.16) ಸ್ಥಾನ ಪಡೆದುಕೊಂಡಿದ್ದಾರೆ.
ಅಂಜುಮನ್ ಇಸ್ಲಾಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಾಕೀರ ಎ.ಮುಜಾವರ, ಕಾರ್ಯದರ್ಶಿ ಖಲಿಕ ಎಂ.ಮುಲ್ಲಾ ಹಾಗೂ ಆಡಳಿತ ಮಂಡಳಿ ಸದಸ್ಯರು, ಪಾಲಕರು, ಪ್ರಾಚಾರ್ಯರು ಮತ್ತು ಎಲ್ಲ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.