HomeGadag Newsಗುಣಮಟ್ಟದ ಹಣ್ಣು ಗ್ರಾಹಕರಿಗೆ ಲಭ್ಯವಾಗಲಿ: ಸಚಿವ ಎಚ್.ಕೆ. ಪಾಟೀಲ

ಗುಣಮಟ್ಟದ ಹಣ್ಣು ಗ್ರಾಹಕರಿಗೆ ಲಭ್ಯವಾಗಲಿ: ಸಚಿವ ಎಚ್.ಕೆ. ಪಾಟೀಲ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದುಗಿನ ಮಾರುಕಟ್ಟೆಯಲ್ಲಿ ಹೂವು-ಹಣ್ಣು ವ್ಯಾಪಾರ ವಹಿವಾಟುಗಳನ್ನು ವೃದ್ಧಿಸಲು ಸಾಕಷ್ಟು ಅವಕಾಶಗಳಿದ್ದು, ಬೆಳೆಗಾರರು, ವ್ಯಾಪಾರಸ್ಥರು ಗ್ರಾಹಕರಿಗೆ ವೈವಿಧ್ಯಮಯ ಹಣ್ಣು-ಹಂಪಲುಗಳನ್ನು ಪೂರೈಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಅವರು ಬುಧವಾರ ಗದಗ ಎಪಿಎಂಸಿ ಪ್ರಾಂಗಣದಲ್ಲಿ ಹೋಲ್‌ಸೇಲ್ ಹಣ್ಣಿನ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿ, ಬೆಂಗಳೂರಿನಲ್ಲಿ ಲಭ್ಯವಾಗುವ ಎಲ್ಲ ರೀತಿಯ ಹಣ್ಣು-ಹಂಪಲುಗಳು ಗದುಗಿನ ಮಾರುಕಟ್ಟೆಯಲ್ಲಿಯೂ ಗ್ರಾಹಕರಿಗೆ ಲಭ್ಯವಾಗುವ ಮೂಲಕ ಅವರ ಆರೋಗ್ಯದಲ್ಲಿಯೂ ಗುಣಾತ್ಮಕ ಬದಲಾವಣೆ ಬರುವಂತಾಗಲಿ ಎಂದರು.

ಗದಗ ಎಪಿಎಂಸಿ ಮಾರುಕಟ್ಟೆಯಲ್ಲಿ ಈಗಾಗಲೇ ದಿನಸಿ, ಒಣಮೆಣಸಿನಕಾಯಿ, ಹೂವು ಒಂದೇ ಕಡೆ ವಹಿವಾಟು ನಡೆದುಕೊಂಡು ಬಂದಿದ್ದು, ಇದೀಗ ಹೋಲ್‌ಸೇಲ್ ಹಣ್ಣಿನ ಮಳಿಗೆಗಳೂ ಸಹ ಇಲ್ಲಿ ಶುಭಾರಂಭಗೊಂಡಿದ್ದು ಇನ್ನು ಮುಂದೆ ಗದಗ ಗ್ರೇನ್ ಮಾರುಕಟ್ಟೆಯಲ್ಲಿ ನಡೆಯುತ್ತಿದ್ದ ಈ ವಹಿವಾಟು ಎಪಿಎಂಸಿಯಲ್ಲಿ ನಡೆಯಬೇಕು. ಅದಕ್ಕೆ ಎಪಿಎಂಸಿ ಕಾರ್ಯದರ್ಶಿಗಳು ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕಲ್ಲದೆ, ವ್ಯಾಪಾರಸ್ಥರ ಬೇಡಿಕೆಯಂತೆ ಸಿಸಿ ರಸ್ತೆ ಹಾಗೂ ಬೀದಿ ದೀಪದ ವ್ಯವಸ್ಥೆಗಾಗಿ ಕ್ರಿಯಾಯೋಜನೆ ಸಿದ್ಧಪಡಿಸಿ 15 ದಿನಗಳಲ್ಲಿ ಭೂಮಿ ಪೂಜೆ ಜರುಗಿಸಬೇಕೆಂದು ಸೂಚಿಸಿದರು.

ಮುಖ್ಯ ಅತಿಥಿಗಳಾಗಿ ಗಣ್ಯರಾದ ಕೃಷ್ಣಾ ಪರಾಪೂರ, ಪೀರಸಾಬ ಕೌತಾಳ, ಬಿ.ಬಿ. ಅಸೂಟಿ, ಸುವರ್ಣಾ ವಾಲಿಕಾರ, ಸುಧಾ ಬಂಡಿ, ಎಂ.ಆರ್. ನದಾಫ್, ಸಾದಿಕ್ ನರಗುಂದ, ಸುರೇಶ ಕಟ್ಟಿಮನಿ, ಬರಕತ್‌ಅಲಿ ಮುಲ್ಲಾ, ರಿಯಾಜ್‌ಅಹ್ಮದ್ ಅತ್ತಾರ, ರಮೇಶ ಮುಳಗುಂದ, ಅಬ್ದುಲ್‌ರೆಹಮಾನ್ ಹುಯಿಲಗೋಳ, ಮಕ್ಬುಲ್‌ಸಾಬ ಶಿರಹಟ್ಟಿ, ಚಂದ್ರು ಬಾಳಿಹಳ್ಳಿಮಠ, ಬಾಷಾಸಾಬ ಮಲ್ಲಸಮುದ್ರ, ಐ.ಬಿ. ದಾವಲಸಾಬ, ರಮೇಶ್ ಶೆಟ್ಟೆಪ್ಪನವರ ಜೆ.ಸಿ. ಶಿರಹಟ್ಟಿ ಪಾಲ್ಗೊಂಡಿದ್ದರು.

ವೇದಿಕೆಯ ಮೇಲೆ ಹೋಲ್‌ಸೇಲ್ ಹಣ್ಣಿನ ಮಳಿಗೆಗಳ ದಲಾಲರ ಸಂಘದ ಗೌರವ ಅಧ್ಯಕ್ಷ ಮುನೀರ್ ನರೇಗಲ್, ಅಧ್ಯಕ್ಷ ಅಶ್ರಫ್‌ಅಲಿ ನಸಬಿ, ಉಪಾಧ್ಯಕ್ಷ ಬಸಪ್ಪ ಲಕ್ಕುಂಡಿ, ಕಾರ್ಯದರ್ಶಿ ಮೆಹರ್‌ಅಲಿ ಢಾಲಾಯತ್ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಮೌಲಾನಾ ಹಾಫೀಜ್ ಹುಸೇನಸಾಬ ಬಾಗಲಿ ಕುರಾನ್ ಪಠಿಸಿದರೆ, ಅಬ್ದುಲ್‌ರೆಹಮಾನ ಹುಯಿಲಗೋಳ ಸ್ವಾಗತಿಸಿದರು. ಬಾಷಾಸಾಬ ಮಲ್ಲಸಮುದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಬಾಹುಬಲಿ ಜೈನರ್ ನಿರೂಪಿಸಿದರು. ಕೊನೆಗೆ ಮಹ್ಮದ್‌ಅಲಿ ರೋಣ ವಂದಿಸಿದರು.

ಕಾರ್ಯಕ್ರಮದಲ್ಲಿ ಹೋಲ್‌ಸೇಲ್ ಹಣ್ಣಿನ ವ್ಯಾಪಾರಸ್ಥರಾದ ಅಲಿ ಹುಯಿಲಗೋಳ, ಕರಿಯಪ್ಪ ಹಂಜಗಿ, ರೆಹಾನ್ ಕಾಟಾಪೂರ, ಆಝಾದ್ ಶಿರಹಟ್ಟಿ, ಬಸಪ್ಪ ಲಕ್ಕುಂಡಿ, ಮೆಹಬೂಬಸಾಬ ಶಿರಹಟ್ಟಿ, ಅಜರ್ ಶಿರಹಟ್ಟಿ, ಸರ್ಫರಾಜ ಈಟಿ, ಮುನೀರ್ ನರೇಗಲ್ಲ, ಅಬ್ದುಲ್‌ರಜಾಕ್ ಮುಲ್ಲಾ, ಅಬ್ದುಲ್ ಕಾಟಾಪೂರ, ಇಲಿಯಾಸ್ ಶಿರಹಟ್ಟಿ, ಸಲೀಮ್ ಡಾಲಾಯತ್ ಮುಂತಾದವರು ಪಾಲ್ಗೋಂಡಿದ್ದರು.

ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ವೀರೇಶ್ವರ ಪುಣ್ಯಾಶ್ರಮದ ಪೂಜ್ಯ ಡಾ. ಕಲ್ಲಯ್ಯಜ್ಜನವರು, ವ್ಯಾಪಾರ ವಹಿವಾಟಿನಲ್ಲಿ ಸತ್ಯ, ನಿಷ್ಠೆ, ಪ್ರಾಮಾಣಿಕತೆ ಇರಲಿ. ಧರ್ಮ ಮತ್ತು ನ್ಯಾಯದ ದುಡಿಮೆ ನಿಶ್ಚಿತವಾಗಿಯೂ ಫಲ ನೀಡಬಲ್ಲದು. ಹೂವು ಮತ್ತು ಹಣ್ಣಿನ ಮಳಿಗೆಯ ವ್ಯಾಪಾರ ವಹಿವಾಟು ಎಪಿಎಂಸಿಯಲ್ಲಿ ಉತ್ತಮ ರೀತಿಯಲ್ಲಿ ನಡೆಯಲಿ. ಇದಕ್ಕೆ ಗುರು ಪಂಚಾಕ್ಷರ, ಪುಟ್ಟರಾಜರ ಕೃಪೆ ಸದಾವಕಾಲ ಇದೆ ಎಂದರು.

“ಕೇವಲ ಅನಾರೋಗ್ಯ ಇದ್ದವರು ಹಣ್ಣು-ಹಂಪಲು ಸೇವಿಸುವ ಪದ್ಧತಿ ಒಂದು ಕಾಲದಲ್ಲಿತ್ತು. ಜನತೆಯ ಆಹಾರ ಪದ್ಧತಿಯೂ ಬದಲಾಗಿದೆ. ಎಲ್ಲ ಬಗೆಯ ಹಣ್ಣುಗಳು ಗದಗ ಜಿಲ್ಲೆಯಲ್ಲಿ ಬೆಳೆಯುವಂತಾಗಲಿ. ಗುಣಮಟ್ಟದ ಹಣ್ಣು ಗ್ರಾಹಕರಿಗೆ ಸಿಗುವಂತಾಗಲಿ. ಹೋಲ್‌ಸೇಲ್ ಹಣ್ಣಿನ ದಲಾಲರು ಒಗ್ಗಟ್ಟಿನಿಂದ ಎಪಿಎಂಸಿಯಲ್ಲಿ ವ್ಯಾಪಾರ ನಡೆಸಲಿ”

ಎಚ್.ಕೆ. ಪಾಟೀಲ.

ಜಿಲ್ಲಾ ಉಸ್ತುವಾರಿ ಸಚಿವರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!