ವಿಜಯಪುರ: ಪಾಕಿಸ್ತಾನದ ವಿರುದ್ಧ ಇಂದಿರಾ ಗಾಂಧಿ ಅವರು ಕ್ರಮ ಕೈಗೊಂಡ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಶತ್ರು ರಾಷ್ಟ್ರದ ವಿರುದ್ಧ ಯುದ್ಧ ಆಗಲೇಬೇಕು,
Advertisement
ಪಾಕ್ಗೆ ತಕ್ಕ ಶಾಸ್ತಿ ಮಾಡಬೇಕು. ಹಾಗಾಗಿ ಇಂದಿರಾ ಗಾಂಧಿ ಅವರು ಕ್ರಮ ಕೈಗೊಂಡ ರೀತಿಯಲ್ಲಿ ಕ್ರಮ ಆಗಬೇಕು. ಮೋದಿ ಜೊತೆಗೆ ಎಲ್ಲ ರಾಜಕೀಯ ಪಕ್ಷಗಳೂ ಇವೆ ಎಂದು ಭರವಸೆ ನೀಡಿದರು. ಬಿಜೆಪಿಯವರು ಬೇಕಾದ್ದು ಮಾಡಬಹುದು ಅಂದುಕೊಂಡಿದ್ದಾರೆ.
ನಾಳೆ ದಿನ ಮೋದಿ ಕಾರ್ಯಕ್ರಮದಲ್ಲಿ ನಾವು 50 ಜನ ಹೋಗಿ ಗಲಾಟೆ ಮಾಡಿದ್ರೆ ಅಥವಾ ಹೆಣ್ಣು ಮಕ್ಕಳನ್ನ ಮುಂದೆ ಬಿಟ್ಟು ಗಲಾಟೆ ಮಾಡಿಸಿದ್ರೆ ಹೇಗಿರುತ್ತೆ? ಬಿಜೆಪಿಯಲ್ಲಿ ಗಂಡಸರು ಬರಬೇಕಾಗಿತ್ತಲ್ವಾ? ಅವರ ಪಕ್ಷದಲ್ಲಿ ಗಂಡಸರು ಇರಲಿಲ್ವಾ ಅಂತ ಲೇವಡಿ ಮಾಡಿದರು.