HomeGadag Newsಸೊಲ್ಲಾಪುರದಿಂದ ಗಾಂಜಾ ಪೂರೈಕೆ, ಗದಗದಲ್ಲಿ ಮಾರಾಟ: ಗಂಗಿಮಡಿಯ ಇಬ್ಬರು ಸೇರಿ ನಾಲ್ವರ ಬಂಧನ

ಸೊಲ್ಲಾಪುರದಿಂದ ಗಾಂಜಾ ಪೂರೈಕೆ, ಗದಗದಲ್ಲಿ ಮಾರಾಟ: ಗಂಗಿಮಡಿಯ ಇಬ್ಬರು ಸೇರಿ ನಾಲ್ವರ ಬಂಧನ

ಗದಗ: ಸೊಲ್ಲಾಪುರದಿಂದ ಗಾಂಜಾ ತಂದು ಗದಗದಲ್ಲಿ ಸಣ್ಣ ಸಣ್ಣ ಪ್ಯಾಕೆಟ್‌ಗಳಾಗಿ ಮಾರಾಟ ಮಾಡುತ್ತಿದ್ದ ಜಾಲವನ್ನು ಗದಗ ಗ್ರಾಮೀಣ ಪೊಲೀಸರು ಭೇದಿಸಿದ್ದಾರೆ.

ನಗರದ ಗಂಗಿಮುಡಿಯ ಹೊಸ ಅಪಾರ್ಟ್‌ಮೆಂಟ್‌ ಸಮೀಪ ದಾಳಿ ನಡೆಸಿದ ಪೊಲೀಸರು, ಇಬ್ಬರು ಅಂತರರಾಜ್ಯ ಆರೋಪಿಗಳು ಸೇರಿದಂತೆ ನಾಲ್ವರನ್ನು ಬಂಧಿಸಿ, ₹1.17 ಲಕ್ಷ ಮೌಲ್ಯದ 2 ಕೆ.ಜಿ. 341 ಗ್ರಾಂ ಒಣ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಅಕ್ರಮ ಗಾಂಜಾ ಮಾರಾಟದ ಕುರಿತು ಖಚಿತ ಮಾಹಿತಿ ಪಡೆದ ಗದಗ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಸಿದ್ಧರಾಮೇಶ್ವರ ಗಡೇದ ಅವರ ನೇತೃತ್ವದ ತಂಡ ಅ.17ರಂದು ವಿಶೇಷ ಕಾರ್ಯಾಚರಣೆ ನಡೆಸಿತು. ಈ ವೇಳೆ ಗಂಗಿಮಡಿಯ ಹೊಸ ಅಪಾರ್ಟ್‌ಮೆಂಟ್‌ ಹತ್ತಿರ ಗಾಂಜಾ ಮಾರಾಟದಲ್ಲಿ ತೊಡಗಿದ್ದ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಸೊಲ್ಲಾಪುರದಿಂದ ಗದಗಕ್ಕೆ ಗಾಂಜಾ ಪೂರೈಕೆಯಾಗುತ್ತಿದ್ದ ಜಾಲದ ಮಾಹಿತಿ ಹೊರಬಿದ್ದಿದೆ.

ಸಣ್ಣ ಪ್ಯಾಕೆಟ್‌ಗಳಲ್ಲಿ ಮಾರಾಟ, ₹200ಕ್ಕೆ ಖರೀದಿ ₹400ಕ್ಕೆ ಮಾರಾಟ!

ಪೊಲೀಸರ ವಿಚಾರಣೆ ಪ್ರಕಾರ, ಗದಗದ ಮಂಜುನಾಥ್ ಸೊಲ್ಲಾಪುರದಿಂದ ಗಾಂಜಾ ತರಿಸಿ ಸಣ್ಣ ಸಣ್ಣ ಪ್ಯಾಕೆಟ್‌ಗಳನ್ನಾಗಿ ಮಾಡಿ ಬಾಷಾಸಾಬನಿಗೆ ತಲಾ ₹200ಕ್ಕೆ ಮಾರಾಟ ಮಾಡುತ್ತಿದ್ದ. ಬಾಷಾಸಾಬ ಅದೇ ಪ್ಯಾಕೆಟ್‌ಗಳನ್ನು ಸಾರ್ವಜನಿಕರಿಗೆ ₹300ರಿಂದ ₹400ರವರೆಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಮಹಾರಾಷ್ಟ್ರದ ಸೊಲ್ಲಾಪುರದ ಆಕಾಶ್ ಮತ್ತು ರವಿ ಗಾಂಜಾ ತಂದು ಪೂರೈಕೆ ಮಾಡುತ್ತಿದ್ದರು ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ.

ನಗರದ ಸಬ್‌ಜೈಲ್‌ ಸಮೀಪದ ಸೆಟ್ಲಮೆಂಟ್ ನಿವಾಸಿ ಸುಖದೇವ ಜಾದವ್ ಅವರ ಪುತ್ರ ಮಂಜುನಾಥ್ (36), ಗಂಗಿಮಡಿ ನಿವಾಸಿ ಅಬ್ದುಲಸಾಬ ಬುವಾಜಿ ಅವರ ಪುತ್ರ ಬಾಷಾಸಾಬ (26), ಮಹಾರಾಷ್ಟ್ರದ ಸೊಲ್ಲಾಪುರದ ನಾಗನಾಥ ಕಡಕೇಕರ ಅವರ ಪುತ್ರ ಆಕಾಶ್ (23) ಹಾಗೂ ಶಿವಾಜಿ ಕಡಕೇಕರ ಅವರ ಪುತ್ರ ರವಿ (20) ಬಂಧಿತರು.

ಬಂಧಿತರಿಂದ ₹1,17,050 ಮೌಲ್ಯದ 2 ಕೆ.ಜಿ. 341 ಗ್ರಾಂ ಒಣ ಗಾಂಜಾ, ಮಾರಾಟದಿಂದ ಬಂದಿದ್ದ ₹1,200 ನಗದು, ಗಾಂಜಾ ಚಿಟಿಕೆಗಳು, ತೂಕದ ಯಂತ್ರ, ಪ್ಲಾಸ್ಟಿಕ್ ಪ್ಯಾಕೆಟ್‌ಗಳ ಬಂಡಲ್, ಸ್ಟೇಪ್ಲರ್ ಹಾಗೂ ಒಂದು ಸ್ಯಾಮ್‌ಸಂಗ್ ಮೊಬೈಲ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 269/2026ರ ಅಡಿಯಲ್ಲಿ ಎನ್‌ಡಿಪಿಎಸ್ ಕಾಯ್ದೆ-1985ರ ಕಲಂ 20(ಬಿ)(ii)(ಎ) ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಬಂಧಿತ ನಾಲ್ವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಪೊಲೀಸ್ ಇನ್‌ಸ್ಪೆಕ್ಟರ್ ಸಿದ್ಧರಾಮೇಶ್ವರ ಗಡೇದ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಸಿಬ್ಬಂದಿಗಳಾದ ಮೆಹಬೂಬ್ ವಡ್ಡಟ್ಟಿ, ಪ್ರಕಾಶ ಗಾಣಿಗೇರ, ಮಹೇಶ ಗೊಳಗೊಳಕಿ, ಅನಿಲ್ ಬನ್ನಿಕೊಪ್ಪ ಹಾಗೂ ಹುಸೇನಸಾಬ ಮ್ಯಾಗಳಮನಿ ಅವರ ಕಾರ್ಯಕ್ಕೆ ಗದಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಿಥುನ್ ಎಚ್.ಎನ್ ಮತ್ತು ಗದಗ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಮುರ್ತುಜಾ ಖಾದ್ರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img