ಬೆಂಗಳೂರು: ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿ ಬಗ್ಗೆ ಇಡೀ ದೇಶವೇ ಖಂಡನೆ ವ್ಯಕ್ತಪಡಿಸುತ್ತಿದೆ. ಆದ್ದರಿಂದ ದೇಶದಲ್ಲಿ ಶೋಕಾಚರಣೆ ನಡೆಯುತ್ತಿದೆ. ಆದ್ರೂ ಐಪಿಎಲ್ ನಡೆಯಲು ಬಿಟ್ಟಿದ್ದಾರೆ ಎಂದು ಎಐಸಿಸಿ CWC ಸದಸ್ಯ ಬಿಕೆ ಹರಿಪ್ರಸಾದ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ದಾಳಿಯಿಂದ 26 ಭಾರತೀಯರು ಮೃತಪಟ್ಟ ಹಿನ್ನೆಲೆಯಲ್ಲಿ ದೇಶದಲ್ಲಿ ಶೋಕಾಚರಣೆ ನಡೆಯುತ್ತಿದೆ. ಹಾಗಿದ್ದರೂ ಐಪಿಎಲ್ ನಡೆಯಲು ಬಿಟ್ಟಿದ್ದಾರೆ. ಇದಕ್ಕೆ ಏನು ಕಾರಣ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನಿಲುವು ಬಹಳ ಸ್ಪಷ್ಟವಾಗಿದೆ. ನಮ್ಮ ಹೇಳಿಕೆಗಳನ್ನು ತಿರುಚಲಾಗುತ್ತಿದೆ. ಅದಕ್ಕೆಲ್ಕ ಮುಂದೆ ಉತ್ತರ ಕೋಡ್ತೇವೆ ಎಂದ ಅವರು, ಅಮಿತ್ ಶಾ ರಾಜೀನಾಮೆ ವಿಚಾರವಾಗಿ ಮಾತನಾಡಿ, ಮುಂಬೈ ದಾಳಿಯಾದಾಗ ಶಿವರಾಜ್ ಪಾಟೀಲ್ ರಾಜೀನಾಮೆ ಕೊಟ್ಟಿದ್ರು. ನಾವು ಈಗ ರಾಜೀನಾಮೆ ಕೇಳುತ್ತಿಲ್ಲ. ಆದ್ರೆ ನಿರ್ಧಾರ ಅವರೇ ಮಾಡಬೇಕು ಎಂದರು.



