ಹಾವೇರಿ:- ಚಾಲಕನೋರ್ವ ತನ್ನ ಕರ್ತವ್ಯ ಮರೆತು ರಸ್ತೆ ಮಧ್ಯೆ ಸಾರಿಗೆ ಬಸ್ ನಿಲ್ಲಿಸಿ ಪ್ರಯಾಣಿಕರು ಕೂರುವ ಸೀಟ್ ಮೇಲೆ ನಮಾಜ್ ಮಾಡಿರುವ ಘಟನೆ ಹಾವೇರಿಯಲ್ಲಿ ಜರುಗಿದೆ.
Advertisement
ಸಾರಿಗೆ ಬಸ್ ನಿಲ್ಲಿಸಿ ಹಾವೇರಿ ಮಾರ್ಗ ಮಧ್ಯದಲ್ಲಿ ಕಂಡಕ್ಟರ್ ಕಂ ಡ್ರೈವರ್ ನಮಾಜ್ ಮಾಡಿದ ವಿಡಿಯೋ ವೈರಲ್ ಆಗಿದೆ. ಹಾನಗಲ್ ಟು ವಿಶಾಲಗಡ್ ಬಸ್ ಡ್ರೈವರ್ ಕಂ ಕಂಡಕ್ಟರ್ ಬಸ್‌ನಲ್ಲೇ ನಮಾಜ್ ಮಾಡಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಇದನ್ನು ನೋಡಿದ ಬಸ್ಸಿನಲ್ಲಿದ್ದ ಪ್ರಯಾಣಿಕರು ಒಂದು ಕ್ಷಣ ದಂಗಾಗಿದ್ದಾರೆ. ಪ್ರಯಾಣಿಕರೊಬ್ಬರು ಇದರ ವೀಡಿಯೋ ಮಾಡಿ ವೈರಲ್ ಮಾಡಿದ್ದಾರೆ. ಕರ್ತವ್ಯದ ಅವಧಿಯಲ್ಲಿಯೇ ನಮಾಜ್ ಮಾಡಿದ್ದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಸಧ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ನೋಡಿ ನೆಟ್ಟಿಗರು ತರಾವರಿ ಕಾಮೆಂಟ್ ಮಾಡುತ್ತಿದ್ದಾರೆ.