ವಿಶೇಷ ದಿನದಂದು ಅಮ್ಮನ ನೆನೆದು ಭಾವುಕರಾದ ಕಿಚ್ಚ ಸುದೀಪ್‌

0
Spread the love

ಸ್ಯಾಂಡಲ್‌ ವುಡ್‌ ನಟ ಕಿಚ್ಚ ಸುದೀಪ್‌ ಅವರ ತಾಯಿ ಸರೋಜಾ ಸಂಜೀವ್‌ ಕಳೆದ ಕೆಲ ತಿಂಗಳ ಹಿಂದೆ ನಿಧನರಾಗಿದ್ದಾರೆ. ಅಮ್ಮನ ಸಾವಿನ ಬಳಿಕ ನೋವಿನಲ್ಲಿರುವ ಕಿಚ್ಚ ಸುದೀಪ್​ ಈಗಲೂ ನಿತ್ಯಪೂಜೆ ಪೂಜೆ ಸಲ್ಲಿಸುತ್ತಿದ್ದಾರೆ. ತಾಯಿ ಸರೋಜಾ (Saroja) ಅವರು ಕೂರುತ್ತಿದ್ದ ಕುರ್ಚಿಗೆ ಪ್ರತಿನಿತ್ಯ ಗೌರವ ಸಲ್ಲಿಸುತ್ತಿದ್ದಾರೆ. ಅಷ್ಟೇ ಅಲ್ಲ ತಾಯಿ ಹಾಕುತ್ತಿದ್ದ ಪಾದರಕ್ಷೆಗೆ ಒಂದು ಪೀಠ ಮಾಡಿ ಸುದೀಪ್ ಅವರು ಪ್ರತಿನಿತ್ಯ ತಪ್ಪದೇ ಪೂಜೆ ಸಲ್ಲಿಸುತ್ತಿದ್ದಾರೆ. ಇದೀಗ ಕಿಚ್ಚ ಅವರು ಅಮ್ಮನ ವಿಶೇಷ ದಿನದಂದು ಅವರನ್ನು ನೆನಪು ಮಾಡಿಕೊಂಡು ಭಾವುಕರಾಗಿದ್ದಾರೆ.

Advertisement

ಇಂದು ಕಿಚ್ಚ ಸುದೀಪ್‌ ಅವರ ತಂದೆ ತಾಯಿ ಮದುವೆ ಆದ ದಿನ. ಆದರೆ ಇಂದು ಸುದೀಪ್‌ ಅವರ ತಾಯಿ ಇಲ್ಲ. ಇದೀಗ ತಾಯಿಯನ್ನು ನೆನೆದು ಕಿಚ್ಚ ಸುದೀಪ್‌ ಭಾವುಕರಾಗಿದ್ದಾರೆ.

ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿರುವ ಸುದೀಪ್‌, ಇಂದು ನನ್ನ ಅಮ್ಮ, ಅಪ್ಪ ಅವರ 59 ವರ್ಷಗಳ ಒಡನಾಟವಾಗುತ್ತಿತ್ತು. ಆ ಶೂನ್ಯವನ್ನು ಯಾವುದೂ ತುಂಬಲು ಸಾಧ್ಯವಿಲ್ಲ ಅಮ್ಮ. ನೀನಿಲ್ಲದೆ ಯಾವುದೂ ಎಂದಿಗೂ ಒಂದೇ ರೀತಿ ಕಾಣುವುದಿಲ್ಲ.ಲವ್ ಯು ಅಮ್ಮ. ಲವ್ ಯು ಅಪ್ಪಾ ಎಂದು ಬರೆದುಕೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here