IPL 2025: ಟೂರ್ನಿಯಲ್ಲಿ ಮೂರನೇ ಗೆಲುವು ಕಂಡ CSK: ಕ್ಯಾಪ್ಟನ್ ಧೋನಿ‌ ಹೇಳಿದ್ದೇನು..?

0
Spread the love

ಕೋಲ್ಕತ್ತಾ ಈಡನ್ ಗಾರ್ಡನ್ ಸ್ಟೇಡಿಯಂನಲ್ಲಿ ನಡೆದ IPL ಹಣಾಹಣಿಯಲ್ಲಿ ಎಂ.ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಕಮಾಲ್ ಮಾಡಿದೆ. KKR ವಿರುದ್ಧ CSK ಕೊನೇ ಓವರ್‌ನಲ್ಲಿ ಗೆದ್ದು ಬೀಗಿದೆ. ಈ ಗೆಲುವಿನ ಬಳಿಕ ಮಾತನಾಡಿದ ಮಹೇಂದ್ರ ಸಿಂಗ್ ಧೋನಿ, ತಾನು ನಿವೃತ್ತಿ ಅಂಚಿನಲ್ಲಿರುವುದನ್ನು ಬಹಿರಂಗಪಡಿಸಿದ್ದಾರೆ. ಆದರೆ ಅದು ಸದ್ಯಕ್ಕಿಲ್ಲ ಎಂಬುದನ್ನು ಸಹ ಸ್ಪಷ್ಟಪಡಿಸಿದ್ದಾರೆ. ಈಗ ನನಗೆ 43 ವರ್ಷ. ಇದನ್ನು ನೀವು ಮರೆಯಬೇಡಿ ಎಂದು ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.

Advertisement

ಅಭಿಮಾನಿಗಳಿಂದ ನನಗೆ ಯಾವಾಗಲೂ ಪ್ರೀತಿ ಮತ್ತು ವಾತ್ಸಲ್ಯ ಸಿಕ್ಕಿದೆ. ಹೀಗಾಗಿ ನಾನು ಬಹಳ ಸಮಯದಿಂದ ಆಡುತ್ತಿದ್ದೇನೆ. ಇದಾಗ್ಯೂ ನನಗೆ 43 ವರ್ಷವಾಗಿದೆ ಎಂಬುದು ಅಭಿಮಾನಿಗಳಿಗೆ ಗೊತ್ತಿರಲಿ. ಅವರಲ್ಲಿ ಹಲವರಿಗೆ ನನ್ನ ಕೊನೆಯ ಪಂದ್ಯ ಯಾವಾಗ ಎಂದು ತಿಳಿದಿಲ್ಲ. ಹೀಗಾಗಿಯೇ ಅವರು ನನ್ನ ಆಟವನ್ನು ನೋಡಲು ಬಯಸುತ್ತಿದ್ದಾರೆ.

ನಾನು ನನ್ನ ವೃತ್ತಿಜೀವನದ ಕೊನೆಯ ಹಂತದಲ್ಲಿದ್ದೇನೆ ಎಂಬ ಅಂಶದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ಐಪಿಎಲ್ ಮುಗಿದ ನಂತರ, ನನ್ನ ದೇಹವು ಈ ಒತ್ತಡವನ್ನು ತಡೆದುಕೊಳ್ಳುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಲು ನಾನು ಇನ್ನೂ ಆರರಿಂದ ಎಂಟು ತಿಂಗಳು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ ಎಂದು ಧೋನಿ ಹೇಳಿದ್ದಾರೆ.

ಅಲ್ಲದೆ ಸದ್ಯ ಯಾವುದೇ ನಿವೃತ್ತಿ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಆದರೆ ಈ ಬಾರಿಯ ಐಪಿಎಲ್​ ಬಳಿಕ ಮುಂದಿನ ಸೀಸನ್​ಗೆ ತನ್ನ ದೇಹ ಹೊಂದಿಕೊಳ್ಳುತ್ತದೆಯೇ ಎಂಬುದರ ಆಧಾರದ ಮೇಲೆ ನಿವೃತ್ತಿ ಬಗ್ಗೆ ಯೋಚಿಸುತ್ತೇನೆ. ಇದಕ್ಕಾಗಿ ಇನ್ನೂ 6 ರಿಂದ 8 ತಿಂಗಳುಗಳಿವೆ. ಹೀಗಾಗಿ ಸದ್ಯ ನಿವೃತ್ತಿ ಘೋಷಿಸುವ ಇರಾದೆಯಿಲ್ಲ ಎಂದು ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here