Bus Accident: ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ: 7 ಜನರಿಗೆ ಗಂಭೀರ ಗಾಯ

0
Spread the love

ಬೆಂಗಳೂರು: ಕೆಲಸ ಮಾಡುತ್ತಿದ್ದ 35 ಕಾರ್ಮಿಕರನ್ನ ಊಟಕ್ಕೆ ಕರೆದುಕೊಂಡು‌ ಹೋಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿ 7 ಜನರಿಗೆ ಗಾಯಗಳಾಗಿರುವ ಘಟನೆ ದೇವನಹಳ್ಳಿ ಬಳಿಯ ಕೆಂಪೇಗೌಡ ಏರ್ಪೊಟ್ ಗೆ ತೆರಳುವ ಬೇಗೂರು ಜಂಕ್ಷನ್ ಬಳಿ ನಡೆದಿದೆ.

Advertisement

ಏರ್ಪೊಟ್ ನಲ್ಲಿ ಕೆಲಸ ಮಾಡುತ್ತಿದ್ದ 35 ಕಾರ್ಮಿಕರನ್ನ ಊಟಕ್ಕೆ ಕರೆದುಕೊಂಡು‌ ಹೋಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಬಸ್ ಡಿಕ್ಕಿಯಾಗಿದೆ. ಡಿಕ್ಕಿ ಹೊಡೆದ ಪರಿಣಾಮ ಬಸ್ ಪಲ್ಟಿಯಾಗಿ‌ ಅವಘಡ ಸಂಭವಿಸಿದೆ.

ಗಾಯಗೊಂಡ 7 ಕಾರ್ಮಿಕರನ್ನ ದೇವನಹಳ್ಳಿ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನೂ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಟ್ರಾಪಿಕ್ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ರಸ್ತೆಗೆ ಪಲ್ಟಿ ಬಿದ್ದಿದ್ದ ಬಸ್ ತೆರವು ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here