HomeKarnataka Newsಮೋದಿಯವರ ಮನ್ ಕೀ ಬಾತ್ ಕೇಳಿ ಕೇಳಿ ಜನರ ಕಿವಿ ಕಿತ್ತು ಹೋಗಿದೆ: ಪ್ರಿಯಾಂಕ್ ಖರ್ಗೆ

ಮೋದಿಯವರ ಮನ್ ಕೀ ಬಾತ್ ಕೇಳಿ ಕೇಳಿ ಜನರ ಕಿವಿ ಕಿತ್ತು ಹೋಗಿದೆ: ಪ್ರಿಯಾಂಕ್ ಖರ್ಗೆ

For Dai;y Updates Join Our whatsapp Group

Spread the love

ಕಲಬುರಗಿ: ಮೋದಿಯವರ ಮನ್ ಕೀ ಬಾತ್ ಕೇಳಿ ಕೇಳಿ ಜನರ ಕಿವಿ ಕಿತ್ತು ಹೋಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮೋದಿಯವರ ಮನ್ ಕೀ ಬಾತ್ ಕೇಳಿ ಕೇಳಿ ಜನರ ಕಿವಿ ಕಿತ್ತು ಹೋಗಿದೆ.

ಹಾಗಾಗಿ, ಕನಿಷ್ಠ ನಿಮ್ಮದೇ ಮೀಡಿಯಾ ಸ್ನೇಹಿತರು ಹಾಗೂ ಇತರ ಮಾಧ್ಯಮದವರ ಜೊತೆ ಸುದ್ದಿಗೋಷ್ಠಿ ಮಾಡಿದರೆ ನಮ್ಮ ಪ್ರಧಾನಿಗೆ 56 ಇಂಚಿನೆದೆ ಇದೆ ಎಂದು ನಾವೆಲ್ಲರೂ ಒಪ್ಪುತ್ತೇವೆ ಎಂದರು.

ಇನ್ನೂ ಪ್ರತಿ ಬಾರಿಯೂ ತಮ್ಮಿಂದಲೇ ಕದನ ವಿರಾಮ ಸಾಧ್ಯವಾಗಿದೆ ಎಂದು ಟ್ರಂಪ್ ಹೇಳುತ್ತಿದ್ದಾರೆ. ಹಾಗಾದರೆ, ನಮ್ಮ ವಿದೇಶಾಂಗ ನೀತಿ ಟ್ರಂಪ್ ಅವರಿಗೆ ಅಡವಿಡಲಾಗಿದೆಯೇ? ಒಂದು ಕಡೆ ಟ್ರಂಪ್, ಈ ಎರಡು ದೇಶಗಳು ನನ್ನಿಂದಲೇ ನಡೆಯುತ್ತಿವೆ ಎಂಬರ್ಥದಲ್ಲಿ ಮಾತನಾಡುತ್ತಿದ್ದಾರೆ.

ಆದರೂ ಮೋದಿ ಮೌನವಾಗಿದ್ದಾರೆ. ನಮ್ಮ ರಾಷ್ಟ್ರದ ಘನತೆ-ಗೌರವ ಬೇರೆ ರಾಷ್ಟ್ರದ ಬಳಿ ಇಡಬೇಡಿ. ಅವರು (ಟ್ರಂಪ್) ನಿಮಗೆ ಸ್ನೇಹಿತರೇ ಆಗಿದ್ದರೂ ಸರಿ, ನಮ್ಮನ್ನು ಅವರ ಬಳಿ ಅಡವಿಡಬೇಡಿ ಎಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!