ದಿನದಿಂದ ದಿನಕ್ಕೆ ಚಿನ್ನದ ಬೆಲೆ ದುಬಾರಿಯಾಗುತ್ತಿದ್ದು, ಇನ್ನೂ ದರದಲ್ಲಿ ಏರಿಕೆ ಕಾಣಲಿದೆಯಾ ಎನ್ನುವ ಚಿಂತೆ ಜನರಲ್ಲಿ ಕಾಡುತ್ತಿದೆ. ಭಾರತೀಯರು ಚಿನ್ನದ ಬೆಲೆ ಕೊಂಚವಾದರೂ ಇಳಿಕೆಯಾಗಲಿ ಎಂದು ಆಶಿಸುತ್ತಿದ್ದಾರೆ. ಹಬ್ಬ ಹರಿದಿನಗಳಾಗಿರಬಹುದು,
ವಿವಾಹ ಪೂಜೆ ಪುನಸ್ಕಾರಗಳಲ್ಲಿ ಚಿನ್ನಕ್ಕೆ ಹೆಚ್ಚು ಪ್ರಾಶಸ್ತ್ಯವಿದೆ ಹಾಗಾಗಿ ಭಾರತೀಯರು ಚಿನ್ನ ಖರೀದಿಸಲು ಹೆಚ್ಚು ಮುಂದಾಗುತ್ತಾರೆ. ಆದರೆ, ಚಿನ್ನದ ಬೆಲೆ ಕೇಳಿದ್ರೆ ಭಯ ಹುಟ್ಟುತ್ತದೆ, ಆದರೂ ಚಿನ್ನದೆಡೆಗಿನ ಆಕರ್ಷಣೆ ಮಾತ್ರ ಕಡಿಮೆಯಾಗಿಲ್ಲ.
ಚಿನ್ನದ ಬೆಲೆ ಇವತ್ತು ಶುಕ್ರವಾರ ಸ್ವಲ್ಪ ಹೆಚ್ಚಳಗೊಂಡಿದೆ. ಗ್ರಾಮ್ಗೆ 110 ರೂನಷ್ಟು ಬೆಲೆ ಏರಿಕೆ ಕಂಡಿದೆ. ನಿನ್ನೆ ಅದು 195 ರೂಗಳಷ್ಟು ಇಳಿಕೆಗೊಂಡಿತ್ತು. ವಿದೇಶಗಳಲ್ಲಿ ಕೆಲ ದೇಶಗಳಲ್ಲಿ ಬೆಲೆ ಏರಿಕೆಯಾದರೆ, ಮತ್ತೆ ಕೆಲವೆಡೆ ತುಸು ತಗ್ಗಿದೆ. ಈ ಏರಿಳಿತದ ಓಟ ಮತ್ತಷ್ಟು ಕಾಲ ಮುಂದುವರಿಯಬಹುದು.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 87,200 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 95,130 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,700 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 87,200 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 9,700 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 16ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 87,200 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 95,130 ರೂ
- 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 71,350 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 970 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 87,200 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 95,130 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 970 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 87,200 ರೂ
- ಚೆನ್ನೈ: 87,200 ರೂ
- ಮುಂಬೈ: 87,200 ರೂ
- ದೆಹಲಿ: 87,350 ರೂ
- ಕೋಲ್ಕತಾ: 87,200 ರೂ
- ಕೇರಳ: 87,200 ರೂ
- ಅಹ್ಮದಾಬಾದ್: 87,250 ರೂ
- ಜೈಪುರ್: 87,350 ರೂ
- ಲಕ್ನೋ: 87,350 ರೂ
- ಭುವನೇಶ್ವರ್: 87,200 ರೂ