‘ಚಾರ್ಲಿ’ ಖ್ಯಾತಿಯ ನಟ ರಾಧಾಕೃಷ್ಣನ್ ಚಕ್ಯಾತ್ ಹೃದಯಾಘಾತದಿಂದ ನಿಧನ

0
Spread the love

ಖ್ಯಾತ ಛಾಯಾಗ್ರಾಹಕ ಮತ್ತು ಮಲಯಾಳಂ ನಟ ರಾಧಾಕೃಷ್ಣನ್ ಚಕ್ಯಾತ್ ಮೇ 22 ರಂದು ನಿಧನರಾಗಿದ್ದಾರೆ. ಅವರಿಗೆ 53 ವರ್ಷ ವಯಸ್ಸಾಗಿತ್ತು. ತಮ್ಮ ಛಾಯಾಗ್ರಹಣಕ್ಕೆ ಹೆಸರುವಾಸಿಯಾಗಿದ್ದ  ರಾಧಾಕೃಷ್ಣನ್ ಚಕ್ಯಾತ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ರಾಧಾಕೃಷ್ಣನ್‌ ದುಲ್ಕರ್ ಸಲ್ಮಾನ್ ನಟನೆಯ ಚಾರ್ಲಿ  ಚಿತ್ರದ ಮೂಲಕ ನಟನೆಗೆ ಪದಾರ್ಪಣೆ ಮಾಡಿದರು.

Advertisement

ಭಾರತದ ಅತ್ಯಂತ ಗೌರವಾನ್ವಿತ ಫ್ಯಾಷನ್ ಛಾಯಾಗ್ರಾಹಕರಲ್ಲಿ ಒಬ್ಬರಾಗಿದ್ದ ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಪರಿಚಿತ ಮುಖವಾಗಿದ್ದ ರಾಧಾಕೃಷ್ಣನ್ ಚಕ್ಯಾತ್ ಮೇ 23, ಶುಕ್ರವಾರದಂದು ನಿಧನರಾಗಿದ್ದ ರಾಧಕೃಷ್ಣನ್‌ ನಿಧನಕ್ಕೆ ಹಲವರು ಕಂಬನಿ ಮಿಡಿದಿದ್ದಾರೆ.

ಚಾರ್ಲಿ ಚಿತ್ರದಲ್ಲಿ ಚಿತ್ರದಲ್ಲಿ ರಾಧಾಕೃಷ್ಣನ್ ಚಕ್ಯಾತ್ ಪ್ರಮುಖ ಪಾತ್ರ ವಹಿಸಿದ್ದರು. ಮಾರ್ಟಿನ್ ಪ್ರಕ್ಕತ್ ನಿರ್ದೇಶಿಸಿದ ಮತ್ತು ಪ್ರಕ್ಕತ್ ಮತ್ತು ಉನ್ನಿ ಆರ್ ಬರೆದ ಈ ಮಲಯಾಳಂ ಚಿತ್ರ 2015 ರಲ್ಲಿ ಬಿಡುಗಡೆಯಾಯಿತು. ಇದರಲ್ಲಿ ಪಾರ್ವತಿ ಕೂಡ ನಟಿಸಿದ್ದರು.

ಚಕ್ಯಾತ್ ಅವರು 2000 ರಲ್ಲಿ ತಮ್ಮ ಛಾಯಾಗ್ರಹಣ ವೃತ್ತಿಜೀವನವನ್ನು ಪ್ರಾರಂಭಿಸಿದ ರಾಧಾಕೃಷ್ಣನ್‌ ಕೆಲವೇ ವರ್ಷಗಳಲ್ಲಿ, ಅವರು ತಮ್ಮ ವಿಶಿಷ್ಟ ದೃಷ್ಟಿಕೋನ ಮತ್ತು ಕಲಾ ಪ್ರಜ್ಞೆಯಿಂದ ಛಾಯಾಗ್ರಹಣ ಕ್ಷೇತ್ರದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.   ಫ್ಯಾಷನ್, ಜಾಹೀರಾತು, ಛಾಯಾಗ್ರಹಣ ಮತ್ತು ಭಾವಚಿತ್ರಗಳ ಎಲ್ಲಾ ಕ್ಷೇತ್ರಗಳಲ್ಲಿ ಕೆಲಸ ಮಾಡಿದರು.


Spread the love

LEAVE A REPLY

Please enter your comment!
Please enter your name here