ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕುಗಳು ಕೇವಲ ಲಾಭ ಒಂದನ್ನೇ ಗುರಿಯನ್ನಾಗಿಸಿಕೊಳ್ಳದೇ ಸಾರ್ವಜನಿಕರ ಹಿತ ಕಾಪಾಡುವ ಸದುದ್ದೇಶಗಳೊಂದಿಗೆ ಕಾರ್ಯ ನಿರ್ವಹಿಸಬೇಕಾಗುತ್ತದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಪಟ್ಟಣದ ಜಿಲ್ಲೆ ಗ್ರುಪ್‌ನ ಅಂಗ ಸಂಸ್ಥೆಯಾದ ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿಯ ಲಕ್ಷ್ಮೇಶ್ವರ ಶಾಖೆಯಲ್ಲಿ ಶನಿವಾರ ಇ-ಸ್ಟಾಂಪ್ ಸೇವೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದು ಹಣಕಾಸು ಸಂಸ್ಥೆಗಳು ಸಾಕಷ್ಟು ಸಂಖ್ಯೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಗ್ರಾಹಕರ ವಿಶ್ವಾಸವೇ ಅವುಗಳಿಗೆ ಮುಖ್ಯ. ಉತ್ತಮ ಸೇವೆ ಒದಗಿಸುವ ಮೂಲಕ ಅವರಿಗೆ ಸಹಕಾರಿ ಆಗಿರಬೇಕು. ಗ್ರಾಹಕರೇ ಇಲ್ಲದಿದ್ದರೆ ಯಾವುದೇ ಸಂಸ್ಥೆ ಅಥವಾ ಬ್ಯಾಂಕು ನಡೆಯಲು ಸಾಧ್ಯವಿಲ್ಲ. ಗ್ರಾಹಕರೂ ಕೂಡ ಹಣಕಾಸು ಸಂಸ್ಥೆ ಹಾಗೂ ಬ್ಯಾಂಕುಗಳಿಂದ ಪಡೆದ ಸಾಲವನ್ನು ಸರಿಯಾದ ಸಮಯಕ್ಕೆ ಹಿಂತಿರುಗಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಖೆಯ ಸಲಹಾ ಸಮಿತಿ ಸದಸ್ಯರಾದ ಪಶುಪತೆಪ್ಪ ಶಿರಹಟ್ಟಿ, ವೀರಣ್ಣ ಪವಾಡದ, ವೀರಣ್ಣ ಅಂಗಡಿ, ವಿಜಯ ಬೂದಿಹಾಳ, ಗಂಗಾಧರ ಶಿರಹಟ್ಟಿ, ಶಾಖೆ ವ್ಯವಸ್ಥಾಪಕರಾದ ಪವನ ದಾನಿ, ಸಿಬ್ಬಂದಿಗಳಾದ ಶಿವರಾಜ ಬಿದರಳ್ಳಿ, ನಾಗರಾಜ ತೋಟರ, ಕೃಷ್ಣಾ ಶೇವಾಳೆ, ಬಸವರಾಜ ಎಂ ಹಾಗೂ ಗ್ರಾಹಕರು ಇದ್ದರು.