ಯಾವ ಭಾಷೆ ಮೇಲಲ್ಲ, ಯಾವ ಭಾಷೆಯೂ ಕೀಳಲ್ಲ: ಕಮಲ್ ಕನ್ನಡ ವಿವಾದಕ್ಕೆ ಕಿಶೋರ್ ಪ್ರತಿಕ್ರಿಯೆ!

0
Spread the love

ನಟ ಕಮಲ್ ಹಾಸನ್ ಹೇಳಿಕೆಯನ್ನು ಭಾವುಕವಾಗಿ ನೋಡುವ ಅಗತ್ಯವಿಲ್ಲ ಎಂದು ನಟ ಕಿಶೋರ್ ಹೇಳಿದ್ದಾರೆ.

Advertisement

ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂಬ ಕಮಲ್ ಹಾಸನ್ ವಿವಾದದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕಿಶೋರ್, ಕಮಲ್ ಅವರ ಹೇಳಿಕೆಯನ್ನು ಇಷ್ಟು ಭಾವುಕವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದಿದ್ದಾರೆ. ಅವರು ವಿಚಾರವಂತರು ಏನೋ ಹೇಳಿದ್ದಾರೆ, ಅದು ಸರಿಯೋ ತಪ್ಪೊ ಪ್ರಶ್ನೆ ಕೇಳಿ ಉತ್ತರ ಪಡೆಯುವ ಹಕ್ಕು ನಮಗೆ ಇದೆ. ಅವರ ಹೇಳಿಕೆಯಿಂದ ಕನ್ನಡದ ಘನತೆ ಕಡಿಮೆ ಏನೂ ಆಗಿಬಿಡುವುದಿಲ್ಲ. ಯಾವ ಭಾಷೆಯೂ ಮೇಲಲ್ಲ, ಯಾವ ಭಾಷೆಯೂ ಕೀಳಲ್ಲ.

ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಈ ವಿಷಯವನ್ನು ಸಮಾಧಾನವಾಗಿ ಸ್ವೀಕರಿಸಬೇಕಿದೆ, ಜನರನ್ನು ರೊಚ್ಚಿಗೇಳಿಸದಂತೆ ವಿಷಯವನ್ನು ಹ್ಯಾಂಡಲ್ ಮಾಡುವುದು ಸೂಕ್ತ. ಯಾವ ಭಾಷೆಯಿಂದ ಯಾವ ಭಾಷೆ ಬಂದಿದೆ ಎಂದ ಮಾತ್ರಕ್ಕೆ ಅದರಲ್ಲಿ ಅವಮಾನ ಆಗುವಂಥದ್ದು ಏನಿದೆ?’ ಎಂದು ಕಿಶೋರ್ ಪ್ರಶ್ನೆ ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here