ಜೂನ್ 3ರಿಂದ ಗ್ರಾಮದೇವತೆ ಟೋಪ ಜಾತ್ರೆ

0
Spread the love

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಮುಳಗುಂದ ಪಟ್ಟಣದ ಹಳೆಹುಡದ ಶಕ್ತಿಪೀಠದಲ್ಲಿ ವಿರಾಜಮಾನಳಾದ ಶ್ರೀ ಗ್ರಾಮದೇವತೆಯ ಜಾತ್ರಾ ಮಹೋತ್ಸವವು ಜೂನ್ 3ರಿಂದ 6ವರಗೆ ಮುಳಗುಂದ ಗವಿಮಠ ಹಾಗೂ ಧಾರವಾಡ ಮುರುಘಾಮಠದ ಡಾ. ಮಲ್ಲಿಕಾರ್ಜುನ ಮಾಹಾಸ್ವಾಮಿಗಳ ನೇತೃತ್ವದಲ್ಲಿ ಪಟ್ಟಣದ ಎಸ್‌ಜೆಜೆಎಂ ಸಂಯುಕ್ತ ಪದವಿಪೂರ್ವ ಮಾಹಾವಿದ್ಯಾಲಯ ಆವರಣದಲ್ಲಿ ಜರುಗಲಿದೆ ಎಂದು ಗ್ರಾಮ ಜಾತ್ರಾ ಸಮಿತಿಯ ಗೌರವಾಧ್ಯಕ್ಷ ಶಿವಣ್ಣಾ ನೀಲಗುಂದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Advertisement

ಜೂ. 3ರಂದು ಬೆಳಿಗ್ಗೆ 9 ಗಂಟೆಗೆ ಗ್ರಾಮದೇವತೆಯ ಪುರಪ್ರವೇಶ ಕೌಲಪೇಟಿಯ ಶ್ರೀ ದುರ್ಗಾದೇವಿಯ ಮಂದಿರಕ್ಕೆ ಹೋಗುವುದು. ನಂತರ ಕಟ್ಟೆ ಮನೆಗಳಿಗೆ ದಯಮಾಡಿಸಿ ಭಕ್ತರಿಂದ ಉಡಿ ತುಂಬುವ ಕಾರ್ಯದ ನಂಯರ ಚೌತ ಮನೆಯಲ್ಲಿ ವಿರಾಜಮಾನಲಾಗುವಳು. ಸಾಯಂಕಾಲ 6 ಗಂಟೆಗೆ ಜಾತ್ರಾ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಡಾ.ಮಲ್ಲಿಕಾರ್ಜುನ ಮಾಹಾಸ್ವಾಮೀಜಿ ವಹಿಸಿಕೊಳ್ಳುವರು. ಸಮ್ಮುಖವನ್ನು ಗದಗ ಅಡವೀಂದ್ರಮಠದ ಮಹೇಶ್ವರ ಸ್ವಾಮೀಜಿ, ಉದ್ಘಾಟನೆಯನ್ನು ಕಲಕೇರಿಯ ಪಂ.ಡಾ. ರಾಜಗುರು ಗುರುಸ್ವಾಮಿ ನೆರವೇರಿಸುವರು.

ಅಧ್ಯಕ್ಷತೆಯನ್ನು ಟೋಪ ಜಾತ್ರಾ ಸಮಿತಿ ಗೌರವಾಧ್ಯಕ್ಷ ಶಿವಣ್ಣಾ ನೀಲಗುಂದ, ಮುಖ್ಯ ಅತಿಥಿಗಳಾಗಿ ಸಚಿವ ಎಚ್.ಕೆ. ಪಾಟೀಲ, ಮಾಜಿ ಮುಖ್ಯಮಂತ್ರಿ, ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಪ.ಪಂ ಅಧ್ಯಕ್ಷೆ ಯಲ್ಲವ್ವ ಕವಲೂರ ಪಾಲ್ಗೊಳ್ಳುವರು. ನೂತನ ಮೂರ್ತಿ ದಾನಿ ನಾಗರಾಜ ದೇಶಪಾಂಡೆ ದಂಪತಿಗಳಿಗೆ ಹಾಗೂ ಮೂರ್ತಿ ಶಿಲ್ಪಿ ನಾಗಲಿಂಗ ಬಡಿಗೇರ ದಂಪತಿಗಳನ್ನು ಸನ್ಮಾನಿಸಲಾಗುವುದು. ಸಂಗೀತ ಸೇವೆ ರಾಯಚೂರಿನ ಪ್ರಖ್ಯಾತ ವಚನ ಗಾಯಕ ಅಂಬಯ್ಯ ನೂಲ್ವಿ ಇವರಿಂದ ಜರಗುವುದು.

ಜೂ. 4ರಂದು ಬೆಳಿಗ್ಗೆ 9 ಗಂಟೆಗೆ ಗ್ರಾಮದೇವತೆ ರಥವು ಚೌತಿಮನೆಯಿಂದ ಹೊರಟು ದೇವಿಕಟ್ಟೆಗಳಿಗೆ ದಯಮಾಡಿಸಿ ಭಕ್ತರಿಂದ ದೇವಿಗೆ ಉಡಿ ತುಂಬುವ ಕಾರ್ಯ ನಂತರ ಚೌತಮನೆಗೆ ಬಂದು ವಾಸ್ತವ್ಯ ಹೂಡುವಳು. ಸಾಯಂಕಾಲ 6 ಗಂಟೆಗೆ ಧರ್ಮಸಭೆ 1ರ ದಿವ್ಯ ಸಾನ್ನಿಧ್ಯವನ್ನು ಬಳಗಾನೂರ ಚಿಕ್ಕೆನಕೊಪ್ಪ ಚನ್ನವೀರ ಶರಣರಮಠದ ಶಿವಶಾಂತವೀರ ಶರಣರು, ಸಮ್ಮುಖವನ್ನು ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗ ದೇವರು, ಅಧ್ಯಕ್ಷತೆಯನ್ನು ಟೋಪ ಜಾತ್ರಾ ಸಮಿತಿ ಅಧ್ಯಕ್ಷ ಎಂ.ಡಿ. ಬಟ್ಟೂರ ವಹಿಸುವರು.

ಮುಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ, ಮಾಜಿ ಶಾಸಕ ಡಿ.ಆರ್. ಪಾಟೀಲ್, ಯುವ ಧುರೀಣ ಆನಂದ ಗಡ್ಡದೇವರಮಠ, ಪ.ಪಂ ಉಪಾಧ್ಯಕ್ಷೆ ಅನಸೂಯಾ ಸೋಮಗೇರಿ ಪಾಲ್ಗೊಳ್ಳುವರು. ಉಪನ್ಯಾಸಕರಾಗಿ ರಾಯಭಾಗದ ಪ್ರೊ. ವಿ.ಎಸ್. ಮಾಳಿ, ಸಮ್ಮಾನ ದಾಸೋಹಿಗಳಿಗೆ, ಸಂಗೀತ ಸೇವೆ ಧಾರವಾಡದ ಖ್ಯಾತ ಹಿಂದೂಸ್ಥಾನಿ ಗಾಯಕ ಪಂ. ಡಾ. ಎಂ.ವೆಂಕಟೇಶಕುಮಾರ ಇವರಿಂದ ಹಾಗೂ ವಿವಿಧ ಕಲಾವಿದರಿಂದ ಮನೋರಂಜನಾ ಕಾರ್ಯಕ್ರಮಗಳು ಜರುಗುವವು.

ಜೂ.5ರಂದು ಬೆಳಿಗ್ಗೆ 9 ಗಂಟೆಗೆ ಗ್ರಾಮದೇವತೆ ರಥವು ಚೌತಮನೆಯಿಂದ ಹೊರಟು ದೇವಿಕಟ್ಟೆಗಳಿಗೆ ದಯಮಾಡಿಸಿ ಭಕ್ತರಿಂದ ಉಡಿ ತುಂಬಿಕೊಳ್ಳುವುದು ನಂತರ ಚೌತಮನೆಗೆ ಬಂದು ವಾಸ್ತವ್ಯ ಹೂಡುವಳು. ಸಾಯಂಕಾಲ 6 ಗಂಟೆಗೆ ಧರ್ಮಸಭೆ-2ರ ದಿವ್ಯ ಸಾನ್ನಿಧ್ಯವನ್ನು ಹೊಸಳ್ಳಿ ಜಗದ್ಗುರು ಬೂದೀಶ್ವರ ಸಂಸ್ಥಾನಮಠದ ಅಭಿನವ ಬೂದೀಶ್ವರ ಮಾಹಾಸ್ವಾಮಿಗಳು, ಅಧ್ಯಕ್ಷತೆಯನ್ನು ಗೌರಮ್ಮಾ ಬಡ್ನಿ ವಹಿಸುವರು. ಮುಖ್ಯ ಅತಿಥಿಗಳಾಗಿ ರೋಣ ಶಾಸಕ ಜಿ.ಎಸ್. ಪಾಟೀಲ, ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ಹುಬ್ಬಳ್ಳಿ ಧಾರವಾಡ ಮಾಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಪ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಇಮಾಮಸಾಬ ಶೇಖ ಪಾಲ್ಗೊಳ್ಳುವರು. ಉಪನ್ಯಾಸಕರಾಗಿ ಗದಗ ಜಿಲ್ಲಾ ಖಜಾನಾಧಿಕಾರಿ ಹಾಗೂ ಕವಿಗಳಾದ ವಿ.ಹಿರಿನಾಥಬಾಬು, ಸಂಗೀತ ಸೇವೆ ಹುಬ್ಬಳ್ಳಿಯ ಖ್ಯಾತ ಹಿಂದೂಸ್ಥಾನಿ ಗಾಯಕ ಬಾಲಚಂದ್ರ ನಾಕೋಡ ಇವರಿಂದ ನೆರವೇರುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಷಣ್ಮುಖಪ್ಪ ಬಡ್ನಿ, ಉಪಾಧ್ಯಕ್ಷ ಅಶೋಕ ಸೋನಗೋಜಿ, ಚನ್ನಪ್ಪ ಕರಿಗೂಳಪ್ಪನವರ, ನಾಗರಾಜ ನೀಲಗುಂದ, ರಾಮಣ್ಣಾ ಕಮಾಜಿ, ಕೆ.ಎಲ್. ಕರಿಗೌಡರ, ಬಸವರಾಜ ಹಾರೋಗೇರಿ, ಪಿ.ಎ. ವಂಟಕರ ಇದ್ದರು.

“ಜೂನ್ 3ರಿಂದ 5ರವರೆಗೆ ಸಾಯಂಕಾಲ 6ರಿಂದ 7 ಗಂಟೆಯವರೆಗೆ ರೇವಣಶಿದ್ದಯ್ಯ ಮರಿದೇವರಮಠ ಹಾಗೂ ವಿಜಯಲಕ್ಷ್ಮೀ ಹಿರೇಮಠ ಇವರಿಂದ ಸಂಗೀತ ಸೇವೆ ಜರಗುವುದು. ತುಮಕೂರಿನ ಕಿನ್ನರಿ ಲೋಕೇಶ ಇವರಿಂದ ಹಾಗೋರಿ ಭದ್ರಕಾಳಿ ವೀರಗಾಸೆ, ಮಹಿಳಾ ಡೊಳ್ಳು ಕುಣಿತ, ಮಹಿಳಾ ವೀರಗಾಸೆ ಪೂಜಾ ಕುಣಿತ, ಪಾರಿವಾಳ ಕುಣಿತ, ಗೊಂಬೆ ಕುಣಿತ, ಹನುಮವೇಷಗಳು ಜರುಗಲಿವೆ”

ಪ್ರತಿದಿನ ಮಧ್ಯಾಹ್ನ ಶೇಖಿ ಓಣಿಯ ಉರ್ದು ಶಾಲೆಯಲ್ಲಿ ಹಾಗೂ ದಿ. ಈರಮ್ಮಾ ಚನ್ನಬಸಪ್ಪ ಕಮಾಜಿ ಇವರ ಸ್ಮರಣಾರ್ಥ ರಾಮಣ್ಣಾ ಕಮಾಜಿ ಇವರಿಂದ, ಪ್ರತಿದಿನ ರಾತ್ರಿ ಬಾಲಲೀಲಾ ಮಾಹಾಂತ ಶಿವಯೋಗಿ ಕಲಾಭವನದಲ್ಲಿ ದಿ. ಚಂದ್ರಶೇಖರಪ್ಪ ಬಡ್ನಿ ಹಾಗೂ ದಿ.ಮಾಹಾಂತಪ್ಪ ಬಡ್ನಿ ಇವರ ಸ್ಮರಣಾರ್ಥ ಷಣ್ಮುಖಪ್ಪ ಬಡ್ನಿ, ಬಸವರಾಜ ಬಡ್ನಿ, ಮುರುಗೇಶ ಬಡ್ನಿ ಇವರಿಂದ ದಾಸೋಹ ಜರಗುವುದು.


Spread the love

LEAVE A REPLY

Please enter your comment!
Please enter your name here