ಬೆಳಗಾವಿಯಲ್ಲಿ ಭೀಕರ ಅಪಘಾತ: ಓರ್ವ ವೃದ್ಧೆ ಸಾವು, 15ಕ್ಕೂ ಅಧಿಕ ಜನರಿಗೆ ಗಾಯ

0
Spread the love

ಬೆಳಗಾವಿ: ಬೆಳಗಾವಿಯಲ್ಲಿ ಭೀಕರ ಅಪಘಾತ ಸಂಭವಿಸಿ ಓರ್ವ ವೃದ್ಧೆ ಸ್ಥಳದಲ್ಲೇ ಸಾವನ್ನಪ್ಪಿ, 15ಕ್ಕೂ ಅಧಿಕ‌ ಜನರಿಗೆ ಗಾಯವಾಗಿರುವ ಘಟನೆ ಗೋಕಾಕ್ ತಾಲೂಕಿನ ಬೆಣಚಿನಮರಡಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.

Advertisement

ಕೊಳವಿ ಗ್ರಾಮ ಯಲ್ಲವ್ವ ಬೀರನಗಡ್ಡಿ(70) ಮೃತ ದುರ್ಧೈವಿಯಾಗಿದ್ದು, ಬೈಲಹೊಂಗಲ – ಗೋಕಾಕ್ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕೆ ಎಸ್ ಆರ್ ಟಿಸಿ ಬಸ್‌ಗೆ ಲಾರಿ‌ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಪಲ್ಟಿಯಾಗಿದ್ದ ಬಸ್ ನಡಿ ಯಲ್ಲವ್ವ ಸಿಲುಕಿ ಸಾವನ್ನಪ್ಪಿದ್ದಾರೆ.

ಬಸ್‌ನಲ್ಲಿದ್ದ ಉಳಿದ ಪ್ರಯಾಣಿಕರನ್ನು ಕಿಟಕಿ ಗಾಜುಗಳನ್ನು ಒಡೆಯುವ ಮೂಲಕ ಸ್ಥಳೀಯರು ಹೊರ ತಂದರು. ಗಾಯಾಳುಗಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಗೋಕಾಕ್ ಗ್ರಾಮೀಣ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here