ವಿಜಯಸಾಕ್ಷಿ ಸುದ್ದಿ, ಗದಗ: ನಮ್ಮ ನೈಸರ್ಗಿಕ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಪ್ರತಿಯೊಬ್ಬರೂ ಒಂದೊಂದು ಗಿಡ ನೆಡಬೇಕು. ನಾವು ವಾಸಿಸುತ್ತಿರುವ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿಸಿಕೊಳ್ಳುವುದು ನಮ್ಮ ಹೊಣೆ ಎಂದು ಜೇಂಟ್ಸ್ ಗ್ರೂಪ್ ಆಫ್ ಸಖಿ ಸಹೇಲಿ ಗದಗ ಇದರ ಅಧ್ಯಕ್ಷರಾದ ಸುಮಾ ಪಾಟೀಲ ನುಡಿದರು.
ಪರಿಸರ ದಿನಾಚರಣೆ ನಿಮಿತ್ತ ಸರಕಾರಿ ಪ್ರಾಥಮಿಕ ಶಾಲೆ ನಂ. 11ರಲ್ಲಿ ವಿವಿಧ ರೀತಿಯ ಹಣ್ಣುಗಳ ಗಿಡಗಳನ್ನು ನೆಟ್ಟು ಅವರು ಮಾತನಾಡಿದರು.
ಕವಿತಾ ದಂಡಿನ, ಮುಖ್ಯೋಪಾಧ್ಯಾಯರಾದ ಭಾರತಿ ಕುಲಕರ್ಣಿ, ಸಹ ಶಿಕ್ಷಕರಾದ ರೇಣುಕಾ ಹೊಸಮನಿ ಮತ್ತು ಮಂಜುಳಾ ಕೊಳ್ಳಿ ಉಪಸ್ಥಿತರಿದ್ದರು. ನಿರ್ದೇಶಕರಾದ ನಿರ್ಮಲಾ ಪಾಟೀಲ ಸ್ವಾಗತಿಸಿದರು. ಖಜಾಂಚಿ ಆಶಾ ಪಟ್ಟಣಶೆಟ್ಟಿ ಪ್ರಾರ್ಥಿಸಿದರು. ಉಪಾಧ್ಯಕ್ಷೆ ಪ್ರಿಯಾಂಕ ಹಳ್ಳಿಯವರ ವಂದಿಸಿದರು. ಕಾರ್ಯಕ್ರಮದಲ್ಲಿ ಚಂದ್ರಕಲಾ ಸ್ಥಾವರಮಠ, ಸುಗ್ಗಲಾ ಯಳಮಲಿ ಉಪಸ್ಥಿತರಿದ್ದರು.



