HomeGadag Newsನಿಯಮಿತವಾಗಿ ಶಾಲೆಗೆ ಬನ್ನಿ

ನಿಯಮಿತವಾಗಿ ಶಾಲೆಗೆ ಬನ್ನಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನೀವು ನಿಯಮಿತವಾಗಿ ಶಾಲೆಗೆ ಬಂದರೆ ನಿತ್ಯದ ಅಭ್ಯಾಸ ನಿಮಗೆ ತಿಳಿಯುತ್ತದೆ. ಇದರಿಂದ ನೀವು ಜಾಣರಾಗಬಹುದು. ಆದ್ದರಿಂದ ನಿಯಮಿತವಾಗಿ ಶಾಲೆಗೆ ಬನ್ನಿ ಎಂದು ನರೇಗಲ್ಲ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ ಹೇಳಿದರು.

ಪಟ್ಟಣದ ಕೋಡಿಕೊಪ್ಪದಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಬ್ಯಾಗ್, ಸಮವಸ್ತç ಮತ್ತು ಪಠ್ಯಪುಸ್ತಕಗಳನ್ನು ವಿತರಿಸಿ, ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು.

ಅಂದಿನ ಅಭ್ಯಾಸವನ್ನು ನೀವು ಅಂದಿಗೇ ಮುಗಿಸಿದರೆ ನಿಮ್ಮ ಅಭ್ಯಾಸದ ಪ್ರಗತಿ ಹೆಚ್ಚಾಗುತ್ತದೆ. ನಿಮಗೆ ಏನಾದರೂ ಸಂಶಯಗಳು ಬಂದರೆ ನಿಮ್ಮ ಶಿಕ್ಷಕರನ್ನು ಕೇಳಿ ತಿಳಿದುಕೊಳ್ಳಿ. ಮನೆಯಲ್ಲಿ ನಿಮ್ಮ ಪಾಲಕರು ಹೇಳುವ ಚಿಕ್ಕಪುಟ್ಟ ಕೆಲಸಗಳನ್ನು ಮಾಡುವುದರ ಜೊತೆಗೆ, ಶಾಲೆಯಲ್ಲಿ ಶಿಕ್ಷಕರು ನೀಡಿದ ಮನೆಗೆಲಸವನ್ನೂ ಸಹ ಅಂದೇ ಮುಗಿಸಿ. ಇದರಿಂದ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಸೋಮಪ್ಪ ಹನುಮಸಾಗರ, ನಿವೃತ್ತ ಶಿಕ್ಷಕ ಬಿ.ಜಿ. ಹಳ್ಳೂರ, ಕುಬೇರಪ್ಪ ನಾಶಿಪುಡಿ, ಪ್ರಧಾನ ಗುರುಗಳಾದ ಸಂಗಯ್ಯ ಪ್ರಭುಸ್ವಾಮಿಮಠ, ಶಿಕ್ಷಕರಾದ ಬಿ.ಎಸ್. ಕರಮುಡಿ, ಜೆ.ಡಿ. ಶಾಲದಾರ, ಶಿಕ್ಷಕಿಯರಾದ ಎಲ್.ಎಸ್. ಶಿವಪ್ಪಗೌಡರ, ಎಲ್.ಎಸ್. ಗಂಗಾಪೂರ, ಎನ್.ಎ. ಹುಬ್ಬಳೀಕರ ಇನ್ನಿತರರಿದ್ದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img