ಬೆಂಗಳೂರು: ಚಾಲಕನ ಅತಿವೇಗದ ಚಾಲನೆ ಪ್ರಶ್ನಿಸಿದ್ದಕ್ಕೆ ರ‌್ಯಾಪಿಡೋ ಚಾಲಕ ಯುವತಿ ಮೇಲೆ ಹಲ್ಲೆ ಮಾಡಿರುವ ಘಟನೆ ಜಯನಗರದಲ್ಲಿ ನಡೆದಿದೆ. ಬೈಕ್ ಟ್ಯಾಕ್ಸಿ ಚಾಲಕ ಸುಹಾಸ್ ಎನ್ನುವಾತ ಶ್ರೇಯಾ ಎನ್ನುವ ಯುವತಿ ಮೇಲೆ ಹಲ್ಲೆ ಮಾಡಿದ್ದಾನೆ.
Rapido bike rider slapped a woman customer when she questioned him over rash driving & jumping signal in Bengaluru.
Argument escalated because the woman spoke only English & the rider knew only Kannada. pic.twitter.com/w32zOQWOiL
— BALA (@erbmjha) June 16, 2025
ಜೂನ್ 14ರಂದು ಈ ಘಟನೆ ನಡೆದಿದೆ. ಆದ್ರೆ, ಇಂದು ಈ ಪ್ರಕರಣ ಬೆಳಕಿಗೆ ಬಂದಿದೆ. ಶ್ರೇಯಾ ಅವರು ಆ ದಿನದಂದು ರ‌್ಯಾಪಿಡೋ ಸೇವೆ ಬಳಸಿಕೊಂಡು ಪ್ರಯಾಣಿಸುತ್ತಿದ್ದರು. ಈ ವೇಳೆ ಚಾಲಕನು ಅತಿ ವೇಗವಾಗಿ ವಾಹನ ಚಲಾಯಿಸುತ್ತಿದ್ದುದರಿಂದ,
ಶ್ರೇಯಾ ಚಾಲಕನನ್ನು ಪ್ರಶ್ನಿಸಿದ್ದಾರೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟಯಾಗಿದ್ದು, ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಚಾಲಕ ಸುಹಾಸ್ ಯುವತಿ ರಪ್ ಅಂತ ಬಾರಿಸಿದ್ದಾನೆ. ಹೊಡೆದ ಏಟಿಗೆ ಯುವತಿ ರಸ್ತೆಗೆ ಬಿದ್ದಿದ್ದಾಳೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ನು ಈ ಗಂಭೀರ ಘಟನೆ ನಡೆದ ನಂತರವೂ ಮಹಿಳೆ ಹೋಗಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಘಟನೆಯ ಬಗ್ಗೆ ಸಂಪೂರ್ಣವಾಗಿ ವಿಡಿಯೋ ಸಮೇತ ಮಾಹಿತಿ ಪಡೆದುಕೊಂಡ ಜಯನಗರ ಪೊಲೀಸ್ ಠಾಣೆ ಸಿಬ್ಬಂದಿ ಎನ್ಸಿಆರ್ ದಾಖಲಿಸಿದ್ದಾರೆ.