HomeGadag News`ಯೋಗ’ ರೋಗಿಯ ಪಾಲಿಗೆ ಸಂಜೀವಿನಿ

`ಯೋಗ’ ರೋಗಿಯ ಪಾಲಿಗೆ ಸಂಜೀವಿನಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಮನೋರಮಾ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚಾರಣೆ ನಿಮಿತ್ತ ವಿದಾರ್ಥಿಗಳಿಗೆ ಯೋಗ ತರಬೇತಿಯನ್ನು ಆಯೋಜಿಸಲಾಗಿತ್ತು.

ಗದುಗಿನ ಯೋಗ ತರಬೇತುದಾರರು ಹಾಗೂ ನಿಸರ್ಗ ಚಿಕಿತ್ಸಾ ತಜ್ಞರಾದ ಡಾ. ಸತೀಶ ಹೊಂಬಾಳಿಯವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಮಾತನಾಡಿ, ಪ್ರತಿನಿತ್ಯ ಜನರು ಒಂದಿಲ್ಲೊಂದು ರೋಗಗಳಿಂದ ಬಳಲುತ್ತಿದ್ದಾರೆ. ವಿವಿಧ ಆಹಾರ ಪದ್ಧತಿಗಳಿಂದ ರೋಗ ಮುಕ್ತ ಜೀವನ ಸಾಧ್ಯವೇ ಇಲ್ಲ ಎಂಬ ಪ್ರಸ್ತುತ ದಿನಮಾನಗಳಲ್ಲಿ ಪ್ರತಿಯೊಬ್ಬರೂ ನಿಯಮಿತವಾಗಿ ಯೋಗ ಮಾಡುವುದನ್ನು ರೂಢಿಸಿಕೊಂಡರೆ ಶಾಂತಿಯುತ, ಆರೋಗ್ಯಯುತ ಜೀವನ ನಡೆಸಲು ಸಾಧ್ಯ. ಯೋಗ ರೋಗಿಯ ಪಾಲಿಗೆ ಸಂಜೀವಿನಿ ಇದ್ದಂತೆ ಎಂದರು.

ಪಾಚಾರ್ಯ ಬಿ.ಎಸ್. ಹಿರೇಮಠ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಆಹಾರ ಸೇವಿಸಿ ದಿನನಿತ್ಯ ಯೋಗ ಅಭ್ಯಾಸ ರೂಢಿಸಿಕೊಳ್ಳಿ. ಬದುಕಿನಲ್ಲಿ ಆರೋಗ್ಯವೇ ಬಹಳ ಮುಖ್ಯ. ಪರಿಸರ ಸಂರಕ್ಷಣೆ ಮಾಡಿ, ಕಾಡು ಬೆಳೆಸಿ, ನಾಡು ಉಳಿಸಿ. ಆರೋಗ್ಯಯುತವಾಗಿರಿ ಎಂದರು.

ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಚೇರಮನ್ ಎನ್.ಎಮ್. ಕುಡತರಕರ ವಹಿಸಿದ್ದರು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ ಕುಡತರಕರ, ಖಜಾಂಚಿ ಸಂಜಯ ಕುಡತರಕರ, ನಿರ್ದೇಶಕ ಚೇತನ ಕುಡತರಕರ, ಆಡಳಿತಾದಿಕಾರಿ ಕಿಶೋರ ಮುದಗಲ್ಲ, ಸಂಯೋಜಕರುಗಳಾದ ಪ್ರೊ. ಶಾಹೀದಾ ಶಿರಹಟ್ಟಿ, ಪ್ರೊ. ಅಲ್ವೀನಾ ಡಿ, ಪ್ರೊ. ಸವಿತಾ ಪೂಜಾರ, ಪ್ರೊ. ಚೈತ್ರಾ ಡಿ, ದೈಹಿಕ ನೀರ್ದೇಶಕರಾದ ಖಯುಮ ನವಲೂರ, ಉಮಾ ದಿನ್ನಿ ಹಾಗೂ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!