ರಸ್ತೆ ಅಪಘಾತ: ತಂಗಿಯ ಶವಸಂಸ್ಕಾರಕ್ಕೆ ಬರುತ್ತಿದ್ದ ಅಕ್ಕ ದುರಂತ ಸಾವು!

0
Spread the love

ದಾವಣಗೆರೆ:- ಇಲ್ಲಿನ ಹರಿಹರ ತಾಲೂಕಿನ ಜಿಗಳಿ ಗ್ರಾಮದಲ್ಲಿ ತಂಗಿಯ ಶವಸಂಸ್ಕಾರಕ್ಕೆ ಬರುತ್ತಿದ್ದ ಅಕ್ಕ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ದಾರುಣ ಘಟನೆ ಜರುಗಿದೆ. 70 ವರ್ಷದ ನೀಲಮ್ಮ ಮೃತ ಮಹಿಳೆ.

Advertisement

ಜಿಗಳಿ ಗ್ರಾಮದ ಕಂಬಳಿಯಲ್ಲಿ ನೀಲಮ್ಮ ಅವರ ತಂಗಿ ಚನ್ನಬಸಮ್ಮ ನಿಧನರಾಗಿದ್ದರು. ಹೀಗಾಗಿ ನೀಲಮ್ಮ ತಂಗಿಯ ಅಂತ್ಯಸಂಸ್ಕಾರಕ್ಕೆ ಸಂಬಂಧಿಯೊಬ್ಬರ ಬೈಕ್‌ನಲ್ಲಿ ಜಿಗಳಿಗೆ ಬರುತ್ತಿದ್ದರು. ಜಿಗಳಿ ಗ್ರಾಮ ಪ್ರವೇಶ ಮಾಡುತ್ತಿದ್ದಂತೆ ಎದುರಿನಿಂದ ಅತಿ ವೇಗವಾಗಿ ಬಂದ ಕಾರ್ ಬೈಕ್‌ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಹಿಂಬದಿ ಕುಳಿತಿದ್ದ ನೀಲಮ್ಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಕಾರು ಚಾಲಕನ ಅಜಾಗರೂಕ ಚಾಲನೆಯಿಂದ ಈ ಅವಘಡ ಸಂಭವಿಸಿದೆ. ಮಲೇಬೆನ್ನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here