ನಿಗೂಢವಾಗಿ ಸಾವನ್ನಪ್ಪಿದ ಒಂದೇ ಮನೆಯ 7 ದನ ಕರುಗಳು: ಅಂತದ್ದೇನಾಯ್ತು?

0
Spread the love

ಮಂಗಳೂರು:- ಒಂದೇ ಮನೆಯ 7 ದನ ಕರುಗಳು ನಿಗೂಢವಾಗಿ ಸಾವನ್ನಪ್ಪಿದ ಘಟನೆ ಮಂಗಳೂರು ನಗರ ಹೊರವಲಯದ ನೀರು ಮಾರ್ಗ ಸಮೀಪದ ಕೆಲರಾಯಿ ಎಂಬಲ್ಲಿ ಜರುಗಿದೆ.

Advertisement

ಒಟ್ಟು 37 ದಿನಗಳಲ್ಲಿ 7 ದನಗಳು ಮೃತಪಟ್ಟಿವೆ. ಕೆಲ ದಿನಗಳ ಹಿಂದೆ ಮನೆ ಸಮೀಪದ ಗುಡ್ಡ ಪ್ರದೇಶಕ್ಕೆ ಮೇಯಲು ಹೋಗಿದ್ದ ದನಗಳು ಅಸ್ವಸ್ಥ ಸ್ಥಿತಿಯಲ್ಲಿ ವಾಪಾಸು ಕೊಟ್ಟಿಗೆಗೆ ಬಂದಿದ್ದವು. ಮೇಯಲು ಹೋಗಿದ್ದ 12 ದನಗಳಲ್ಲಿ ಎರಡು ಗರ್ಭ ಧರಿಸಿದ್ದ ದನ ಸೇರಿದಂತೆ ಒಟ್ಟು ಏಳು ಜಾನುವಾರುಗಳು ಸಾವನ್ನಪ್ಪಿವೆ.

ಜಾನುವಾರುಗಳು ನರಳಿ ನರಳಿ ಸಾವನ್ನಪ್ಪಿದ ದೃಶ್ಯ ಕರುಳು ಹಿಂಡುವಂತಿದೆ. ದನಗಳ ಕುತ್ತಿಗೆ ವಕ್ರವಾಗಿ ಕುಸಿದು ಬೀಳುತ್ತಿದ್ದು, ಆಹಾರ ಸೇವಿಸಲು ಸಾಧ್ಯವಾಗದೆ ನರಳಿ ನರಳಿ‌ ಸಾವನ್ನಪ್ಪುತ್ತಿವೆ. ಈ ಜಾನುವಾರುಗಳ ಸಾವಿಗೆ ಯಾರೋ ವಿರೋಧಿಗಳು ವಿಷಪ್ರಾಶನ ಮಾಡಿರುವ ಅನುಮಾನ ಪ್ರಕಾಶ್ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಬಳಿಕ ಸತ್ಯಾಸತ್ಯತೆ ಹೊರಬೀಳಲಿದೆ.


Spread the love

LEAVE A REPLY

Please enter your comment!
Please enter your name here