HomeKarnataka Newsಮೈಸೂರಿನಲ್ಲಿ ದಸರಾ ದೀಪಾಲಂಕಾರ ಅವಾಂತರ: ಮುರಿದು ಬಿದ್ದ ಬೃಹತ್ ಕಟೌಟ್!

ಮೈಸೂರಿನಲ್ಲಿ ದಸರಾ ದೀಪಾಲಂಕಾರ ಅವಾಂತರ: ಮುರಿದು ಬಿದ್ದ ಬೃಹತ್ ಕಟೌಟ್!

For Dai;y Updates Join Our whatsapp Group

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ದೀಪಾಲಂಕಾರದ ಕಾಮಗಾರಿಯಲ್ಲಾದ ಕಳಪೆ ಕೆಲಸದಿಂದಾಗಿ ಬೃಹತ್ ಲೈಟಿಂಗ್ ಕಟೌಟ್ ಮುರಿದುಬಿದ್ದಿದ್ದು, ದೊಡ್ಡ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ.

ನಗರದ ಪ್ರಮುಖ ಗನ್ ಹೌಸ್ ವೃತ್ತದಲ್ಲಿ ಅಳವಡಿಸಲಾಗಿದ್ದ ದಸರಾ ದೀಪಾಲಂಕಾರದ ಕಟೌಟ್ ಏಕಾಏಕಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಟಿಟಿ ವಾಹನದ ಮೇಲೆ ಬಿದ್ದಿದೆ. ಘಟನೆಯಲ್ಲಿ ವಾಹನ ಚಾಲಕ ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (CESC) ಹಾಗೂ ಕಾಮಗಾರಿಯ ಗುತ್ತಿಗೆ ಪಡೆದಿದ್ದ ಮೋಹನ್ ಎಂಬ ವ್ಯಕ್ತಿಯ ಬೇಜವಾಬ್ದಾರಿತನವೇ ಈ ಘಟನೆಗೆ ಮುಖ್ಯ ಕಾರಣ ಎಂದು ಆರೋಪಿಸಲಾಗಿದೆ. ಬೃಹತ್ ಗಾತ್ರದ ಲೈಟಿಂಗ್ ಕಟೌಟ್ ನಿಲ್ಲಿಸಲು ನಿಯಮದಂತೆ ಆಳವಾದ ತಳಪಾಯ ಹಾಕದೆ, ಕೇವಲ ಅರ್ಧ ಅಡಿಯಷ್ಟು ಸಣ್ಣ ಗುಂಡಿ ತೋಡಿ ಕಂಬ ನೆಡಲಾಗಿತ್ತು.

ಕಟೌಟ್ ಅಳವಡಿಸಿದ ಕೇವಲ ನಾಲ್ಕೇ ದಿನಕ್ಕೆ ಭಾರ ತಾಳಲಾರದೆ ಸಂಪೂರ್ಣವಾಗಿ ನೆಲಕ್ಕೆ ಅಪ್ಪಳಿಸಿದೆ. ದಸರಾ ವೀಕ್ಷಣೆಗೆ ಸಾವಿರಾರು ಪ್ರವಾಸಿಗರು ಆಗಮಿಸುವ ಪ್ರಮುಖ ರಸ್ತೆಯಲ್ಲೇ ಈ ರೀತಿ ಕಳಪೆ ಕಾಮಗಾರಿ ನಡೆಸಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ತಪ್ಪಿತಸ್ಥ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img