HomeKarnataka Newsಶಕ್ತಿ ಯೋಜನೆಯಿಂದ ಗಂಡಸರಿಗೆ ತೊಂದರೆ ಆಗ್ತಿದೆ: ಆರ್. ವಿ ದೇಶಪಾಂಡೆ!

ಶಕ್ತಿ ಯೋಜನೆಯಿಂದ ಗಂಡಸರಿಗೆ ತೊಂದರೆ ಆಗ್ತಿದೆ: ಆರ್. ವಿ ದೇಶಪಾಂಡೆ!

For Dai;y Updates Join Our whatsapp Group

Spread the love

ಬೆಂಗಳೂರು:- ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆಯಿಂದ ಗಂಡಸರಿಗೆ ಸಮಸ್ಯೆ ಆಗುತ್ತಿದೆ ಎಂದು ಮಾಜಿ ಸಚಿವ ಆರ್. ವಿ ದೇಶಪಾಂಡೆ ಹೇಳಿದ್ದಾರೆ.

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಶಕ್ತಿ ಯೋಜನೆಯಿಂದ ಗಂಡಸರಿಗೆ ಸಮಸ್ಯೆ ಆಗುತ್ತಿದೆ. ಶಕ್ತಿ ಯೋಜನೆ ಚೆನ್ನಾಗಿದೆ. ಸಮಸ್ಯೆಯನ್ನು ಸ್ವಲ್ಪ ಸರಿ ಮಾಡಬೇಕು. ಶಕ್ತಿ ಯೋಜನೆಯಿಂದ ಬಸ್‌ನಲ್ಲಿ ಬರೀ ಹೆಂಗಸರೇ ತುಂಬಿರುತ್ತಾರೆ. ಗಂಡಸರ ಸಂಖ್ಯೆ ಕಡಿಮೆ ಆಗುತ್ತಿದೆ. ಇದರಿಂದ ಬಸ್‌ನಲ್ಲಿ ಗಂಡಸರಿಗೆ ಸಮಸ್ಯೆ ಆಗುತ್ತಿದೆ. ಅಪ್ಪಿತಪ್ಪಿ ಹೆಂಗಸರಿಗೆ ಕೈ ತಾಗಿದರೆ ಏನೆಲ್ಲಾ ಸಮಸ್ಯೆ ಆಗಬಹುದು. ಇದನ್ನು ಸೀಮಿತಗೊಳಿಸಿದರೆ ಸಮಸ್ಯೆ ಸರಿ ಹೋಗಬಹುದು ಎಂದರು.

ಶಾಸಕರು ಸಚಿವರನ್ನು ಭೇಟಿಯಾಗಬೇಕು. ಶಾಸಕರ ಸಮಸ್ಯೆ ಇದ್ದರೆ ಅದನ್ನ ಸರಿ ಮಾಡಬೇಕು. ಬಿಆರ್ ಪಾಟೀಲ್ ಹಿರಿಯರು. ಅವರು ಅಭಿಪ್ರಾಯ ಪಡೆಯಲು ಮಾಧ್ಯಮಗಳಲ್ಲಿ ಹೇಳಬಾರದಿತ್ತು. ಸಿಎಂ ಗಮನಕ್ಕೆ ತಂದು ಈ ತರಹ ಆಗುತ್ತಿದೆ ಎಂದು ಹೇಳಬೇಕಿತ್ತು. ಸಿಎಂಗೆ ಈ ಬಗ್ಗೆ ಮಾಹಿತಿ ಕೊಡಬೇಕಿತ್ತು. ಆಗಲೂ ಸಿಎಂ, ಮಂತ್ರಿಗಳು ಸ್ಪಂದನೆ ಮಾಡದೇ ಹೋದರೆ ಹೀಗೆ ಮಾಡಬಹುದಿತ್ತು. ಸಿಎಂ ಮತ್ತು ಸಂಬಂಧಿಸಿದ ಸಚಿವರ ಜೊತೆ ಮಾತಾಡಬೇಕು. ಇದಕ್ಕೆ ಆಡಳಿತ ವ್ಯವಸ್ಥೆ ಕೆಟ್ಟಿದೆ ಎಂದು ಹೇಳೋದು ಸರಿಯಲ್ಲ ಎಂದು ಹೇಳಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!