ನಟ ದಳಪತಿ ವಿಜಯ್ ಹಾಗೂ ತ್ರಿಷಾ ನಡುವೆ ಸಮ್ ಥಿಂಗ್ ಸಮ್ ಥಿಂಗ್ ನಡೆಯುತ್ತಿದೆ. ಇಬ್ಬರ ನಡುವೆ ಪ್ರೀತಿ ಹುಟ್ಟಿದ್ದು ಇದೇ ಕಾರಣಕ್ಕೆ ವಿಜಯ್ ತಮ್ಮ ಪತ್ನಿ ಸಂಗೀತಾಗೆ ವಿಚ್ಚೇದನ ನೀಡುತ್ತಿದ್ದಾರೆ ಎಂಬ ಸುದ್ದಿ ಕಳೆದ ಕೆಲ ವರ್ಷಗಳಿಂದ ಹರಿದಾಡುತ್ತಿದೆ. ಅದಕ್ಕೆ ಪುಷ್ಠಿ ನೀಡುವಂತೆ ತ್ರಿಷಾ ಹಾಗೂ ವಿಜಯ್ ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ತಮ್ಮ ಹಾಗೂ ವಿಜಯ್ ನಡುವಿನ ವದಂತಿಗಳಿಗ ನಟಿ ತ್ರಿಷಾ ಆಕ್ರೋಶ ವ್ಯಕ್ತಪಡಿಸಿದ್ದು ಹೊಲಸು ಮನಸ್ಥಿತಿಯ ಜನ ಎಂದಿದ್ದಾರೆ.
ಜೂ.22ರಂದು ವಿಜಯ್ ಹುಟ್ಟುಹಬ್ಬದ ದಿನ ನಟಿ ತ್ರಿಷಾ ಅವರು ವಿಜಯ್ ನಿವಾಸ ಎನ್ನಲಾಗುವ ಜಾಗದಲ್ಲಿ ಕುಳಿತು ಆತ್ಮೀಯವಾಗಿರುವ ಫೋಟೋವೊಂದನ್ನು ಪೋಸ್ಟ್ ಮಾಡಿ ವಿಶ್ ಮಾಡಿದ್ದರು. ತ್ರಿಷಾ ತಮ್ಮ ಸಾಕು ನಾಯಿ ಇಸ್ಸಿಯೊಂದಿಗೆ ವಿಜಯ್ ಜೊತೆಗಿನ ಫೋಟೋವನ್ನು ಹಂಚಿಕೊಂಡು, “ಹ್ಯಾಪಿ ಬರ್ತ್‌ಡೇ ಬೆಸ್ಟೆಸ್ಟ್” ಎಂದು ಬರೆದುಕೊಂಡಿದ್ದಾರೆ.
ತ್ರಿಷಾ ಪೋಸ್ಟ್ ನೋಡಿದ ಹಲವರು ಇಬ್ಬರ ನಡುವೆ ಪ್ರೀತಿ ಶುರುವಾಗಿದೆ ಎಂದು ಹೇಳಿದ್ದರು. ಇದೀಗ ವದಂತಿಗಳು ಹೆಚ್ಚಾಗುತ್ತಿದ್ದಂತೆ ನಟಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ವದಂತಿಗಳ ಕುರಿತು ಇನ್ಸ್ಸ್ಟಾಗ್ರಾಂ ಸ್ಟೋರಿಯಲ್ಲಿ ಕೆಂಡಕಾರಿರುವ ನಟಿ “ನೀವು ಪ್ರೀತಿಯಲ್ಲಿರುವಾಗ ನಿಮ್ಮನ್ನು ನೋಡಿದ ಹೊಲಸು ಮನಸ್ಥಿತಿಯ ಜನರಲ್ಲಿ ಗೊಂದಲ ಸೃಷ್ಟಿಯಾಗುತ್ತೆ” ಎಂದು ಬರೆದುಕೊಂಡಿದ್ದಾರೆ.