ಪ್ರೀತಿಗೆ ವಿರೋಧ: ಹೆತ್ತ ತಾಯಿಯನ್ನೇ ಕೊಲೆಗೈದ 16 ವರ್ಷದ ಮಗಳು!

0
Spread the love

ಹೈದರಾಬಾದ್: 16 ವರ್ಷದ ಅಪ್ರಾಪ್ತ ಮಗಳೊಬ್ಬಳು ತನ್ನ ಬಾಯ್ ಫ್ರೆಂಡ್ ಜೊತೆಗಿನ ಸಂಬಂಧಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕಾಗಿ ಹೆತ್ತ ತಾಯಿಯನ್ನೇ ಕೊಂದಿರುವ ಘಟನೆ ಹೈದರಾಬಾದ್ ನ ಜೆಡಿಮೆಟ್ಲಾ ಪ್ರದೇಶದ ಎನ್‌ಎಲ್‌ಬಿ ನಗರದಲ್ಲಿ ಜರುಗಿದೆ.

Advertisement

19 ವರ್ಷದ ಬಾಯ್ ಫ್ರೆಂಡ್ ಹಾಗೂ ಆತನ ಕಿರಿಯ ಸೋದರನ ಜೊತೆ ಸೇರಿಕೊಂಡು ತಾಯಿಯನ್ನು ಮಗಳು ಮುಗಿಸಿದ್ದಾಳೆ. ಹತ್ತನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಗೆ 8 ತಿಂಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ 19 ವರ್ಷದ ಯುವಕನ ಪರಿಚಯವಾಗಿದೆ.

ಬಳಿಕ ಆತನೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದಾಳೆ. ಈ ವಿಷಯ ಯುವತಿಯ ತಾಯಿಗೆ ಗೊತ್ತಾಗಿದೆ. ತಾಯಿ, ಅಪ್ರಾಪ್ತ ಮಗಳು ಯುವಕನ ಜೊತೆ ಸಂಬಂಧ ಬೆಳೆಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಮನೆಯಲ್ಲಿ ತಾಯಿ- ಮಗಳ ನಡುವೆ ಜಗಳಕ್ಕೆ ಕಾರಣವಾಗಿದೆ.

ಜೂನ್ 23 ರಂದು ಅಪ್ರಾಪ್ತ ವಿದ್ಯಾರ್ಥಿನಿಯ ತಾಯಿ ಅಂಜಲಿಯನ್ನು ಮಗಳೇ ಮುಗಿಸಿದ್ದಾಳೆ. ಈ ವೇಳೆ ಬಾಯ್ ಫ್ರೆಂಡ್ ಹಾಗೂ ಆತನ ಸೋದರ ಕೂಡ ಮನೆಯಲ್ಲಿದ್ದು ಮಹಿಳೆಯ ಕುತ್ತಿಗೆ ಹಿಸುಕಿದ್ದಾರೆ. ಬಳಿಕ ಐರನ್ ರಾಡ್​ನಿಂದ ಹೊಡೆದಿದ್ದಾರೆ. ಜೊತೆಗೆ ಚಾಕುವಿನಿಂದ ಅಂಜಲಿಗೆ ಇರಿದಿದ್ದಾರೆ. ಹೈದರಾಬಾದ್‌ನ ಜೆಡಿಮೆಟ್ಲಾ ಪೊಲೀಸರು ಕೊಲೆ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮಗಳಿಗೆ ಬುದ್ಧಿವಾದ ಹೇಳಿದ್ದಕ್ಕೆ ತಾಯಿಯೇ ತನ್ನ ಜೀವ ಕಳೆದುಕೊಂಡಿದ್ದಾಳೆ.


Spread the love

LEAVE A REPLY

Please enter your comment!
Please enter your name here