ಗದಗ: ಚಲಿಸುವ ವೇಳೆಯೇ ಸರ್ಕಾರಿ ಬಸ್’ನ ಮುಂಭಾಗದ ಚಕ್ರ ಕಳಚಿಕೊಂಡಿರುವಂತಹ ಘಟನೆ ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದ ಬಳಿ ನಡೆದಿದೆ. ಬೆಳ್ಳಟ್ಟಿಯಿಂದ ಶಿರಹಟ್ಟಿಗೆ ತೆರಳುತ್ತಿದ್ದ ವೇಳೆ ಬಸ್ ಚಕ್ರ ಉರುಳಿ ಹೋಗಿ ರಸ್ತೆ ಪಕ್ಕಕ್ಕೆ ಬಿದ್ದಿದೆ.
Advertisement
ಚಾಲಕನ ಸಮಯಪ್ರಜ್ಞೆಯಿಂದ ಭಾರಿ ದುರಂತ ತಪ್ಪಿದೆ. ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಡಕೋಟಾ ಬಸ್‌ಗಳ ಬಳಕೆಯ ಬಗ್ಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಹೊಸ ಬಸ್ ಗಳನ್ನು ಒದಗಿಸುವಂತೆ ಒತ್ತಾಯಿಸಿದ್ದಾರೆ.