ಬುರ್ಖಾ ಕಳ್ಳಿಯರಿದ್ದಾರೆ ಎಚ್ಚರ: ಕ್ಷಣಾರ್ಧದಲ್ಲಿ ಗೃಹಬಳಕೆ ವಸ್ತು ಎಗರಿಸುವ ಕಳ್ಳಿಯರು!

0
Spread the love

ಕೊಪ್ಪಳ:- ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ಬುರ್ಖಾ ಕಳ್ಳಿಯರು ಪತ್ತೆಯಾಗಿದ್ದಾರೆ. ಬುರ್ಖಾ ಹಾಕಿಕೊಂಡು ಬಂದ ಕಳ್ಳಿಯರು ಗೃಹಬಳಕೆಯ ಸಾಮಾಗ್ರಿಗಳನ್ನು ಕ್ಷಣಮಾತ್ರದಲ್ಲಿ ಕಳ್ಳತನ ಮಾಡಿದ್ದಾರೆ.

Advertisement

ವಿಎ ಬಜಾರ್‌ನಲ್ಲಿ ಜೂನ್ 18ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬುರ್ಖಾ ಧರಿಸಿಕೊಂಡು ಬಂದ ಇಬ್ಬರು ಮಹಿಳೆಯರು ಆಹಾರ ಸಾಮಾಗ್ರಿಗಳನ್ನು ತಮ್ಮ ಬಟ್ಟೆಯೊಳಗೆ ಸೇರಿಸಿಕೊಂಡು ಕಳ್ಳತನ ಮಾಡಿದ್ದಾರೆ.

20 ಸಾವಿರ ಮೌಲ್ಯದ ಆಹಾರ ಸಾಮಾಗ್ರಿಗಳನ್ನು ಕಳ್ಳತನ ಮಾಡಿದ್ದಾರೆ. ಕಳ್ಳಿಯರ ಕೈಚಳಕ ಸಿಸಿಟಿವಿಯಲ್ಲಿ ಕಂಡು ಅಂಗಡಿ ಮಾಲೀಕರು ಶಾಕ್ ಆಗಿದ್ದಾರೆ. ಕಾರಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


Spread the love

LEAVE A REPLY

Please enter your comment!
Please enter your name here