ಡಿವೈಡರ್​ಗೆ ಡಿಕ್ಕಿ ಹೊಡೆದ ಟೆಂಪೊ: ಮೂವರಿಗೆ ಗಂಭೀರ ಗಾಯ!

0
Spread the love

ಬೆಂಗಳೂರು:- ಭೀಕರ ಅಪಘಾತದಲ್ಲಿ ಡಿವೈಡರ್​ಗೆ ಟೆಂಪೊ ಡಿಕ್ಕಿ ಹೊಡೆದು ಎರಡು ಪೀಸ್ ಆಗಿ ಬ್ರಿಡ್ಜ್​ನಿಂದ ಕೆಳಗೆ ಬಿದ್ದಿರುವಂತಹ ಘಟನೆ ಜ್ಙಾನಭಾರತಿ ರಿಂಗ್ ರಸ್ತೆಯ ರಾಮಸಂದ್ರ ಬ್ರಿಡ್ಜ್ ಬಳಿ ನಡೆದಿದೆ.

Advertisement

ಈ ಬೆಚ್ಚಿ ಬೀಳಿಸುವ ಅಪಘಾತ ಕಂಡು ವಾಹನ ಸವಾರರು ಆಘಾತಗೊಂಡರು. ಜುಲೈ 5 ರಂದು ಮಧ್ಯಾಹ್ನ 1 ಗಂಟೆಗೆ ಬ್ಯಾಡರಹಳ್ಳಿ ಕಡೆಯಿಂದ ಕೆಂಗೇರಿ ಕಡೆಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.

ಟೆಂಪೊದಲ್ಲಿ ಇದ್ದ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆ ಸಂಬಂಧ ಜ್ಙಾನಭಾರತಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here