ಪತ್ನಿಗೆ ಅಶ್ಲೀಲ ಮೆಸೇಜ್: ಕಾಮುಕನಿಗೆ ಬುದ್ಧಿ ಕಲಿಸಿದ ಹಾಸ್ಯ ನಟ ಸಂಜು ಬಸಯ್ಯ

0
Spread the love

ಸೋಶಿಯಲ್‌ ಮೀಡಿಯಾದಲ್ಲಿ ಹೆಣ್ಣುಮಕ್ಕಳಿಗೆ ಕೆಟ್ಟ ಕೆಟ್ಟ ಕಾಮೆಂಟ್‌ಗಳನ್ನು ಮಾಡೋದು ಅಥವಾ ಅಶ್ಲೀಲವಾಗಿ ಮೆಸೇಜ್‌ಗಳನ್ನ ಮಾಡೋದು ಕಾಮನ್‌ ಆಗಿದೆ. ಇದೀಗ ಪತ್ನಿಗೆ ಅಶ್ಲೀಲವಾಗಿ ಮೆಸೇಜ್‌ ಮಾಡಿದ ಕಾಮುಕನಿಗೆ ಹಾಸ್ಯ ಕಲಾವಿದ ಸಂಜು ಬಸಯ್ಯ ಸರಿಯಾಗಿ ಬುದ್ದಿ ಕಲಿಸಿದ್ದು ಈ ಮೂಲಕ ಹಲವರಿಗೆ ಸಂಜು ಮಾದರಿಯಾಗಿದ್ದಾರೆ.

Advertisement

ಸಂಜು ಬಸಯ್ಯ ಅವರ ಪತ್ನಿ ಪಲ್ಲವಿ ಅವರಿಗೆ ವಿಜಯನಗರ ಮೂಲದ ಮನೋಜ್‌ ಎಂಬ ಪಿಯುಸಿ ವಿದ್ಯಾರ್ಥಿಯು ಇನ್ಸ್ಟಾಗ್ರಾಮ್‌ ಮೂಲಕ ಅಶ್ಲೀಲ ಸಂದೇಶ ಹಾಗೂ ಫೋಟೋಗಳನ್ನ ಕಳುಹಿಸಿದ್ದಾನೆ. ಈ ಬಗ್ಗೆ ಬೈಲಹೊಂಗಲ ಪೊಲೀಸ್‌ ಠಾಣೆಯಲ್ಲಿ ಸಂಜು ಬಸಯ್ಯ ದೂರು ನೀಡಿದ್ದು ತಕ್ಷಣವೇ ಅಲರ್ಟ್‌ ಆದ ಪೊಲೀಸರು ಆರೋಪಿಯನ್ನು ಕರೆಸಿ ಶಿಕ್ಷೆ ನೀಡಿದ್ದಾರೆ. ಈ ವೇಳೆ ಯುವಕ ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದ್ದಾನೆ.

ಈ ಬಗ್ಗೆ ಸಂಜು ಬಸಯ್ಯ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡು, “ಮನೋಜ್‌ ಅಂತ ಈತ ನನ್ನ ಧರ್ಮಪತ್ನಿ ಪಲ್ಲವಿಗೆ ಇನ್ಸ್ಟಾಗ್ರಾಮ್‌ನಲ್ಲಿ ಅಶ್ಲೀಲವಾಗಿ ಫೋಟೋಗಳು ಮತ್ತು ವಿಡಿಯೋಗಳನ್ನು ಕಳುಹಿಸಿದ್ದರು. ಇದರ ಜೊತೆಗೆ ನಾವು ಪರ್ಸನಲ್‌ ಐಡಿಯನ್ನು ಸೇವ್‌ ಮಾಡಿಕೊಂಡು ಬೈಲಹೊಂಗಲ ಸ್ಟೇಷನ್‌ನಲ್ಲಿ ಕಂಪ್ಲೇಂಟ್‌ ಕೊಟ್ಟಾಗ, ಈ ವ್ಯಕ್ತಿಯನ್ನು ಊರಿನಿಂದ ಕರೆದುಕೊಂಡು ಬಂದು, ಅವನಿಗೆ ಕಠಿಣವಾದ ಶಿಕ್ಷೆ ಕೊಟ್ಟಿದ್ದಾರೆ. ನಾವು ಕೇಳಿಕೊಳ್ಳುವುದು ಇಷ್ಟೇ. ಕೆಟ್ಟ ಕೆಟ್ಟದಾಗಿ ಕಾಮೆಂಟ್‌ಗಳು ಅಥವಾ ಮೆಸೇಜ್‌ಗಳು ಮಾಡಿದ್ರೂ ಕೂಡ ನಾವು ಓದುತ್ತಾ ಇರ್ತೇವೆ ಹಾಗೂ ಗಮನಿಸುತ್ತಿರುತ್ತೇವೆ ಅನ್ನೋದು ನಿಮ್ಮ ಗಮನಕ್ಕಿರಲಿ” ಎಂದು ಸಂಜು ಬಸಯ್ಯ ಹೇಳಿದ್ದಾರೆ.

“ಕೆಟ್ಟ ಕೆಟ್ಟ ಕಾಮೆಂಟ್‌ಗಳಿಗೆ ನಾವು ರಿಯಾಕ್ಟ್‌ ಮಾಡಲ್ಲ ಅಂತ ನೀವು ಪದೇ ಪದೇ ಮಾಡ್ತಾ ಇದ್ರೆ, ಇವನಿಗೆ ಆದ ಶಿಕ್ಷೆ ನಿಮಗೂ ಖಂಡಿವಾಗಿಯೂ ಆಗುತ್ತದೆ. ಈ ಬಗ್ಗೆ ನಾವು ಇಷ್ಟು ದಿನ ತಲೆ ಕೆಡಿಸಿಕೊಂಡಿಲ್ಲ. ಆದರೆ ಇನ್ಮೇಲೆ ತಲೆ ಕೆಡಿಸಿಕೊಳ್ಳಬೇಕಾಗುತ್ತದೆ. ಯಾಕಂದ್ರೆ ನಮಗೂ ಲೈಫ್‌ ಇದೆ. ನಾವು ಸೋಶಿಯಲ್‌ ಮೀಡಿಯಾದಲ್ಲಿ ಗುರುತಿಸಿಕೊಂಡಿದ್ದೇವೆ. ನಮಗೆ ಅದರಿಂದ ಲೈಫ್‌ ಇದೆ. ಹೀಗಾಗಿ ನೀವು ಅರಿವಿಟ್ಟುಕೊಂಡು ಮೆಸೇಜ್‌ಗಳನ್ನು ಮಾಡಿ. ನಿಮ್ಮ ಫ್ಯಾಮಿಲಿ ಆಗಲಿ ಅಥವಾ ನಮ್ಮ ಫ್ಯಾಮಿಲಿ ಎಲ್ಲವೂ ಕೂಡ ಒಂದೇ ಆಗಿರುತ್ತದೆ. ನಿಮ್ಮ ಅಕ್ಕ-ತಂಗಿಯರು ನಮ್ಮ ಅಕ್ಕ-ತಂಗಿಯರಿದ್ದಂತೆ” ಎಂದು ಸಂಜು ಬಸಯ್ಯ ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here