Supreme court: ರಿಂಗ್ ರೋಡ್ ಹತ್ಯೆ ಪ್ರಕರಣ: ಶುಭಾ ಶಂಕರನಾರಾಯಣ್’ಗೆ ಜೀವಾವಧಿ ಶಿಕ್ಷೆ!

0
Spread the love

ಬೆಂಗಳೂರು: 2003ರಲ್ಲಿ ನಗರವನ್ನು ಬೆಚ್ಚಿಬೀಳಿಸಿದ್ದ ಪ್ರಸಿದ್ಧ ರಿಂಗ್‌ ರೋಡ್ ಹತ್ಯೆ ಪ್ರಕರಣದಲ್ಲಿ ಅಪರಾಧಿ ಶುಭಾ ಶಂಕರನಾರಾಯಣ್‌ಗೆ ಸುಪ್ರೀಂ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದ್ದು, ಆರೋಪಿಯ ಅರ್ಜಿಯನ್ನು ತಿರಸ್ಕರಿಸಿದೆ.

Advertisement

ಹತ್ಯೆ ಪ್ರಕರಣದ ಹಿನ್ನೆಲೆ:
2003ರ ನವೆಂಬರ್ 30ರಂದು ಕಾನೂನು ವಿದ್ಯಾರ್ಥಿನಿ ಆಗಿದ್ದ ಶುಭಾ ಶಂಕರನಾರಾಯಣ್ ಅವರ ನಿಶ್ಚಿತಾರ್ಥ, ಸಾಫ್ಟ್‌ವೇರ್ ಇಂಜಿನಿಯರ್ ಬಿವಿ ಗಿರೀಶ್ (27) ಅವರೊಂದಿಗೆ ನಡೆದಿತ್ತು. ಮದುವೆ ಮುಂದಿನ ವರ್ಷ ನಿಗದಿಯಾಗಿದ್ದಾಗಲೇ, ನಿಶ್ಚಿತಾರ್ಥವಾದ ಮೂರೇ ದಿನದೊಳಗೆ, ಗಿರೀಶ್ ಹತ್ಯೆಯು ಸಂಭವಿಸಿತ್ತು.

ಕೊಲೆಗಾಗಿ ಪ್ಲಾನ್:
ಶುಭಾ ತನ್ನ ಪ್ರಿಯಕರ ಅರುಣ್ ವರ್ಮಾ ಅವರೊಂದಿಗೆ ಸೇರಿ ಗಿರೀಶ್ ಹತ್ಯೆಗೆ ಪೂರ್ತಿಯಾಗಿ ಪ್ಲಾನ್ ರೂಪಿಸಿದ್ದಳು. ಡಿಸೆಂಬರ್ 3ರ ರಾತ್ರಿ, ಗಿರೀಶ್‌ನ್ನು ಊಟಕ್ಕೆ ಕರೆದುಕೊಂಡು ಹೋಗಿ, ನಂತರ HAL ಏರ್‌ಪೋರ್ಟ್ ಹತ್ತಿರದ ಕತ್ತಲ ಪ್ರದೇಶದಲ್ಲಿ “ಏರೋಪ್ಲೇನ್ ನೋಡೋಣ” ಎಂಬ ನೆಪದಲ್ಲಿ ನಿಲ್ಲಿಸಿ, ಮುಂಚಿತವಾಗಿ ಕಾಯುತ್ತಿದ್ದ ಗ್ಯಾಂಗ್ ಮೂಲಕ ಆತನನ್ನು ಹತ್ಯೆಗೈದಳು.

ಹತ್ಯೆಯ ವೇಳೆ ಅಲ್ಲೇ ಇದ್ದ ಶುಭಾ ಅಮಾಯಕಿಯಂತೆ ವರ್ತಿಸಿ, “ಬಿಡಿ ಬಿಡಿ” ಎಂದು ಬೇಡಿಕೊಳ್ಳುತ್ತಿದ್ದ ನಾಟಕವಾಡಿದ್ದಳು. ಆದರೆ ಬಳಿಕದ ಪೊಲೀಸರ ತನಿಖೆಯಲ್ಲಿ ಕೊಲೆ ಹಿಂದಿರುವ ಪೂರ್ಣ ಪ್ಲಾನ್, ಪ್ರೇಮ ಸಂಬಂಧ ಮತ್ತು ಶತ್ರುತ್ವ ಬಯಲಾಗಿತು.

ನ್ಯಾಯದ ತೀರ್ಪು:
ಈ ಪ್ರಕರಣವು ಹೈಕೋರ್ಟ್‌ನಿಂದ ಜೀವಾವಧಿ ಶಿಕ್ಷೆಗೆ ತೀರ್ಪು ಪಡೆದಿದ್ದರೂ, ಅದನ್ನು ಪ್ರಶ್ನಿಸಿ ಶುಭಾ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಳು. ಆದರೂ ಸುಪ್ರೀಂ ಕೋರ್ಟ್ ಹೈಕೋರ್ಟ್ ತೀರ್ಪು ಸರಿಯೇ ಇದೆ ಎಂದು ಪಡೀತು, ಶುಭಾಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.

 


Spread the love

LEAVE A REPLY

Please enter your comment!
Please enter your name here