ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಕೋಟ್ಯಾಂತರ ಜನರಿಗೆ ಅನ್ನ, ನೀರು, ಉದ್ಯೋಗ ಕೊಟ್ಟ ಮಾಯಾನಗರಿ. ಇಲ್ಲಿ ಭಾಷೆ, ಧರ್ಮ, ಗಡಿಗಳನ್ನು ಮೀರಿದ ಲಕ್ಷಾಂತರ ಜನರು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಕೆಲವರ ಅತಿರೇಕದ ವರ್ತನೆಯಿಂದ ಬೆಂಗಳೂರಿಗರು ಹಾಗೂ ಕನ್ನಡಿಗರನ್ನು ಕೆಣಕುವ ಕೆಲಸಗಳಾಗುತ್ತಿವೆ.
ಇದೀಗ ಸೋಶಿಯಲ್ ಮೀಡಿಯಾ ಇನ್‌ಫ್ಲ್ಯೂಯೆನ್ಸರ್ ಆಗಿರುವ ನೇಹಾ ಬಿಸ್ವಾಲ್ ಎಂಬ ಒಡಿಶಾ ಮೂಲದ ಯುವತಿ, ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದಾಳೆ. ರಸ್ತೆಯಲ್ಲಿ ನಡೆದುಕೊಂಡು ಆಫೀಸ್‌ಗೆ ಹೋಗುವಾಗ, ಯಾರೋ ಒಬ್ಬ ಕಾರು ಚಾಲಕ ವೇಗವಾಗಿ ಹೋದ ಪರಿಣಾಮ ರಸ್ತೆಯಲ್ಲಿದ್ದ ನೀರು ಯುವತಿಯ ಮೇಲೆ ಎರಚಿತ್ತು.
ಫುಟ್‌ಪಾತ್ ಮೇಲೆ ನಡೆದುಕೊಂಡು ಹೋಗದೇ ರಸ್ತೆಯಲ್ಲಿ ನಡೆದುಕೊಂಡು ಹೋಗ್ತಿದ್ದ ಯುವತಿಯು, ನೀರು ಎರಚಿರೋದನ್ನ ರೀಲ್ ಮಾಡಿ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾಳೆ. ಈ ರೀಲ್ಸ್‌ನಲ್ಲಿ ಬೆಂಗಳೂರಿನಲ್ಲಿ ಇರುವ ಜನರಿಗೆ ಶಿಕ್ಷಣ ಇದೆ. ಆದ್ರೆ ಅರ್ಥ ಮಾಡಿಕೊಳ್ಳುವ ಬುದ್ಧಿ ಇಲ್ಲ.
ಇಷ್ಟು ಚೂ* ಜನ ಇದ್ದಾರೆ. ಇಷ್ಟು ಮಳೆ ಬರುತ್ತಿರುವಾಗ ವಾಹನಗಳನ್ನು ವೇಗವಾಗಿ ಚಲಾಯಿಸುತ್ತಾರೆ. ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ವೇಗವಾಗಿ ಕಾರು ಚಾಲನೆ ಮಾಡಿದ್ದರಿಂದ ರಸ್ತೆಯಲ್ಲಿದ್ದ ನೀರು ನನ್ನ ಬಾಯಿಗೆ ಹೋಯಿತು.
ಆ ಚ್ಯೂ*ನ ನೋಡಿ, ಈ ಕಾರನ್ನು ನೋಡಿ. ನೀರು ಹೇಗೆ ನನ್ನ ಮೇಲೆ ಬಿದ್ದಿದೆ ನೋಡಿ. ನನಗೆ ಅಳು, ಸಿಟ್ಟು ಎರಡೂ ಬರುತ್ತಿದೆ. ಥೂ.. ಇಷ್ಟು ಅನಕ್ಷರಸ್ಥರು ಇದ್ದಾರೆ. ನಿಮ್ಮಿಂದ ನಾವು ರಸ್ತೆಯಲ್ಲಿ ನಡೆದಾಡಬಾರದಾ? ಛೀ.. ಎಂದು ರೀಲ್ಸ್‌ನಲ್ಲಿ ಬೆಂಗಳೂರಿಗರಿಗೆ ಬೈದು ಅವಮಾನ ಮಾಡಿದ್ದಾಳೆ. ಬೆಂಗಳೂರಲ್ಲಿರೋರು ಅನಕ್ಷರಸ್ಥರೆಂದು ಯುವತಿ ಆರೋಪಿಸಿದ್ದು, ಆಕೆಯ ಮಾತಿಗೆ ಕನ್ನಡಿಗರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.