ರಾಯಚೂರು:- ಭರ್ತಿ ಹಂತಕ್ಕೆ ತಲುಪಿದ ಬಸವಸಾಗರ ಜಲಾಶಯ ಜನ ಮನ ಸೆಳೆಯುತ್ತಿದೆ. 492.25 ಮೀ ಎತ್ತರದ ಜಲಾಶಯದಲ್ಲಿ 491.68 ಮೀ ನೀರು ತುಂಬಿದೆ.
Advertisement
ಬಸವಸಾಗರ ಜಲಾಶಯಕ್ಕೆ 45,000 ಕ್ಯೂ ಒಳಹರಿವು ಇದ್ದು 10 ಗೇಟ್ ಗಳಿಂದ 40,080 ಕ್ಯೂ ನೀರು ಕೃಷ್ಣಾ ನದಿಗೆ ಹೊರಹರಿವು ಆಗುತ್ತೆ. ಸದ್ಯಕ್ಕೆ ಭರ್ತಿ ಹಂತಕ್ಕೆ ತಲುಪಿದ ಬಸವಸಾಗರ ಜಲಾಶಯದ 33 ಟಿಎಂಸಿಯಲ್ಲಿ 31 ಟಿಎಂಸಿ ನೀರು ಸಂಗ್ರಹ ಆಗಿದೆ.
ಹೀಗಾಗಿ ಕೃಷ್ಣಾ ನದಿಪಾತ್ರದಲ್ಲಿ ಹೈ ಅಲರ್ಟ್ ಸಂದೇಶ ರವಾನೆ ಆಗಿದೆ. ಹೀಗಾಗಿ ಜನರ ಬಹಳ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ಕೊಟ್ಟಿದೆ.