ಮೈಸೂರು: ಯತೀಂದ್ರ ಸಿದ್ದರಾಮಯ್ಯ ತಮ್ಮ ತಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗಿಂತ ಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆಂದು ಹೇಳಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ದುರಹಂಕಾರ ಅನ್ನೊದು ಸಿದ್ದರಾಮಯ್ಯ ವಂಶವಾಹಿನಿಯಲ್ಲಿ ಹರಿಯುತ್ತಿದೆ ಎಂದು ಬಿಜೆಪಿ MLC ಹೆಚ್ ವಿಶ್ವನಾಥ್ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಯತೀಂದ್ರರಂಥವರನ್ನು ತಮ್ಮ ಕಡೆ ಹುಚ್ಚು ಮುಂಡೇದು ಅಂತ ಕರೆಯುತ್ತಾರೆ, ಅವರಿಗಿನ್ನೂ ಚಿಕ್ಕ ವಯಸ್ಸು, ರಾಜಕೀಯದಲ್ಲಿ ಬೆಳೆಯಬೇಕಿದೆ, ಹೀಗೆ ಹುಚ್ಚುಚ್ಚಾಗಿ ಮಾತಾಡುವುದನ್ನು ನಿಲ್ಲಿಸಬೇಕು ಎಂದರು.
ದುರಹಂಕಾರ ಇವರ ವಂಶವಾಹಿಯಾಗಿ ಹರಿಯುತ್ತಿದೆ, ಸಿದ್ದರಾಮಯ್ಯ ನಾನೇ ಶ್ರೇಷ್ಠ ಅನ್ಕೊಂಡು ತಿರುಗುತ್ತಾರೆ, ನಾನು ಮಹಾರಾಜರಿಗಿಂತ ದೊಡ್ಡವ, ದೇವರಾಜ ಅರಸು ಅವರಿಗಿಂತ ಹೆಚ್ಚು ಜನಪ್ರಿಯ, ಖ್ಯಾತಿವಂತ ಅಂತ ಅಂದುಕೊಳ್ಳೋದು ಸರಿಯಲ್ಲ ಎಂದು ಹೇಳಿದರು.