ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದ ಮಾಜಿ ಸೈನಿಕರ ಹಾಗೂ ಪ್ಯಾರಾ ಮಿಲಟರಿ ಯೋಧರ ಕಲ್ಯಾಣ ಸಂಘದ ವತಿಯಿಂದ ಶನಿವಾರ 26ನೇ ಕಾರ್ಗಿಲ್ ವಿಜಯೋತ್ಸವ ರ‍್ಯಾಲಿ ಜರುಗಿತು.
ಕಾರ್ಗಿಲ್ ವಿಜಯೋತ್ಸವ ರ‍್ಯಾಲಿಯು ಪಟ್ಟಣದ ಹಳೆ ಬಸ್ ನಿಲ್ದಾಣ, ಡಾ. ಬಿ.ಆರ್. ಅಂಬೇಡ್ಕರ ನಗರ, ದರ್ಗಾ ಓಣಿ, ವೀರಣ್ಣನ ಪಾದ, ಗಣೇಶ ದೇವಸ್ಥಾನ, ಮಾಜಿ ಗೌಡ್ರ ಪ್ರೆಸ್, ಪಟ್ಟಣ ಪಂಚಾಯಿತಿ ಮುಂಭಾಗ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹೊಸ ಬಸ್ ನಿಲ್ದಾಣದಿಂದ ಗಾಂಧಿ ಭವನದಲ್ಲಿರುವ ಮಾಜಿ ಸೈನಿಕ ಕಛೇರಿಯವರೆಗೆ ಜರುಗಿತು. ರ‍್ಯಾಲಿಯಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರ ಯೋಧರಿಗೆ ನಮನ ಸಲ್ಲಿಸಲಾಯಿತು. ರ‍್ಯಾಲಿಯಲ್ಲಿ ಪಟ್ಟಣದ ಮಾಜಿ ಸೈನಿಕರು ಹಾಗೂ ಪ್ಯಾರಾ ಮಿಲಿಟರಿ ಯೋಧರ ಕಲ್ಯಾಣ ಸಂಘದ ಸದಸ್ಯರು ಪಾಲ್ಗೊಂಡಿದ್ದರು.



