ಮೌನ ನನ್ನ ದೌರ್ಬಲ್ಯವಲ್ಲ, ದೇವರು ಕೊಡುವ ನ್ಯಾಯದ ಮೇಲಿನ ನಂಬಿಕೆ: ಕುತೂಹಲ ಮೂಡಿಸಿದ ನಟಿ ಪವಿತ್ರಾ ಗೌಡ ಪೋಸ್ಟ್

0
Spread the love

ಸೋಷಿಯಲ್‌ ಮೀಡಿಯಾದಲ್ಲಿ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಹಾಗೂ ಸ್ನೇಹಿತೆ ಪವಿತ್ರಾ ಗೌಡ ಪೋಸ್ಟ್‌ ಗಳು ಒಂದರ ಹಿಂದೊದರಂತೆ ಸದ್ದು ಮಾಡುತ್ತಿದೆ. ವಿಜಯಲಕ್ಷ್ಮೀ ಪೋಸ್ಟ್‌ ಬೆನ್ನಲ್ಲೇ ಪವಿತ್ರಾ ಗೌಡ ಪೋಸ್ಟ್‌ ಹಾಕುತ್ತಿದ್ದು ಇದೀಗ ಮೌನ ನನ್ನ ದೌರ್ಬಲ್ಯವಲ್ಲಎಂದುಪವಿತ್ರಾಗೌಡಪೋಸ್ಟ್‌ ಮಾಡಿದ್ದಾರೆ. ಈಪೋಸ್ಟ್‌ ಸಖತ್‌ ಕುತೂಹಲಮೂಡಿಸಿದೆ.

Advertisement

ಕಳೆದ ಕೆಲ ದಿನಗಳ ಹಿಂದೆ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಅವರೊಂದಿಗೆ ಅಸ್ಸಾಂನ ಕಾಮಾಕ್ಯದೇವಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ದೇವಸ್ಥಾನದಲ್ಲಿರುವ ಫೋಟೋ ಹಂಚಿಕೊಂಡಿದ್ದ ವಿಜಯಲಕ್ಷ್ಮೀ, ‘ನಿಮ್ಮನ್ನು ಜನರು ಅದೆಷ್ಟೇ ಕೆಳಕ್ಕೆ ತಳ್ಳಲು ನೋಡಿದರೂ ಕೂಡ, ದೇವರು ನಿಮ್ಮನ್ನು ಮೇಲ್ಮಟ್ಟಕ್ಕೆ ಕರೆದುಕೊಂಡು ಹೋಗುತ್ತಾನೆ. ನಿಮಗೆಲ್ಲರಿಗೂ ದೇವರು ಒಳ್ಳೆಯದು ಮಾಡಲಿ…’ ಎಂದು ಪೋಸ್ಟ್‌ ಮಾಡಿದ್ದರು.

ವಿಜಯಲಕ್ಷ್ಮೀಪೋಸ್ಟ್‌ ಮಾಡುತ್ತಿದ್ದಂತೆಪವಿತ್ರಾ ಗೌಡ ಕೂಡಸೋಷಿಯಲ್‌ ಮೀಡಿಯಾದಲ್ಲಿಪೋಸ್ಟ್‌ ಹಾಕಿ, ‘ಮನುಷ್ಯರು ಬಣ್ಣ ಬದಲಾಯಿಸಿದರೇನು.. ರಾಯರು ನಮ್ಮ ಜೀವನವನ್ನೇ ಬದಲಾಯಿಸುತ್ತಾರೆ..’ ಎಂದು ಬರೆದುಕೊಂಡಿದ್ದರು. ಇದೀಗಅದೇಪೋಸ್ಟ್ ಕೆಳಗಡೆ, ‘MY Silence is not weekness.. Its fairh in God’s Justice…’ (ಮೌನ ನನ್ನ ದೌರ್ಬಲ್ಯವಲ್ಲ, ದೇವರು ಕೊಡುವ ನ್ಯಾಯದ ಮೇಲಿನ ನಂಬಿಕೆ)ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇಬ್ಬರಪೋಸ್ಟ್‌ ವಾರ್‌ ಸಾಕಷ್ಟುಕುತೂಹಲಮೂಡಿಸಿದೆ.


Spread the love

LEAVE A REPLY

Please enter your comment!
Please enter your name here