ಕೊಪ್ಪಳ:- ಇಲ್ಲಿನ ಕುಕನೂರ ತಾಲೂಕಿನ ಮಸಬಹಂಚಿನಾಳದಲ್ಲಿ ಕೆಎಸ್‍ಆರ್‌ಟಿಸಿ ಬಸ್‍ಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
Advertisement
ಯಲಬುರ್ಗಾದಿಂದ ಬೆಂಗಳೂರಿಗೆ ತಡರಾತ್ರಿ ಬಸ್ ಹೊರಟಿತ್ತು. ಬಸ್ ಮಸಬಹಂಚಿನಾಳ ಬಳಿ ತಲುಪಿದ್ದಾಗ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಪರಿಣಾಮ ಬಸ್‍ನ ಗಾಜು ಪುಡಿಪುಡಿಯಾಗಿದೆ.
ಕಲ್ಲು ತೂರಾಟದ ಬಳಿಕ ಬಸ್‍ನ್ನು ಚಾಲಕ ವಾಪಸ್ ಡಿಪೋಗೆ ಕೊಂಡೊಯ್ದಿದ್ದಾರೆ. ಇದರಿಂದ ಪ್ರಯಾಣಿಕರು ರಾತ್ರಿ ವೇಳೆ ಪರದಾಡುವಂತಾಯಿತು.