ಬೆಂಗಳೂರು:- ಕೊಲೆ ಕೇಸ್ ನಲ್ಲಿ ಜೈಲು ಪಾಲಾಗಿರುವ ಪತಿ ದರ್ಶನ್ ನೋಡಲು ಇಂದು ಪರಪ್ಪನ ಅಗ್ರಹಾರ ಜೈಲಿಗೆ ಪತ್ನಿ ವಿಜಯಲಕ್ಷ್ಮೀ ಆಗಮಿಸಿದರು.
ಫಾರ್ಚುನರ್ ಕಾರಿನಲ್ಲಿ ಪೊಲೀಸ್ ಠಾಣೆ ವರೆಗೆ ದರ್ಶನ್ ಪತ್ನಿ ಡ್ರಾಪ್ ಪಡೆದರು. ಪೊಲೀಸ್ ಠಾಣೆ ವರೆಗೂ ಬಿಡಲು ಮನವಿ ಮಾಡಿದರೂ ಪೊಲೀಸ್ ಸಿಬ್ಬಂದಿ ಒಪ್ಪಲಿಲ್ಲ. ಜೈಲು ಚೆಕ್ ಪೋಸ್ಟ್ ಬಳಿ ಕಾರು ತಡೆಯಲಾಯಿತು. ಇದರಿಂದ ಕಾರು ವಾಪಸ್ ಆಯಿತು. ಕೊನೆಗೆ ಜೈಲು ಚೆಕ್ ಪೋಸ್ಟ್ ವರೆಗೆ ವಿಜಯಲಕ್ಷ್ಮಿ ಅವರು ನಡೆದುಕೊಂಡೇ ಬಂದರು. ಜೈಲಿನ ಕಚೇರಿಯಲ್ಲಿ ಸಾಮಾನ್ಯರಂತೆ ವಿಜಯಲಕ್ಷ್ಮಿ ಅವರು ಪ್ರವೇಶ ಪಡೆದು ಪತಿಯನ್ನು ಭೇಟಿಯಾದರು.
ಸಂಜೆ 4:30 ಸುಮಾರಿಗೆ ಜೈಲಿಗೆ ವಿಜಯಲಕ್ಷ್ಮಿ ಆಗಮಿಸಿದ್ದರು. ಸಾಮಾನ್ಯ ಎಂಟ್ರಿ ಪಡೆದು 5 ಗಂಟೆ ಸುಮಾರಿಗೆ ವಾಪಸ್ ಆದರು. ಸಾಮಾನ್ಯ ಎಂಟ್ರಿ ಹಿನ್ನೆಲೆ ಅರ್ಧ ತಾಸು ಮಾತ್ರ ಭೇಟಿಗೆ ಅವಕಾಶ ನೀಡಲಾಗಿತ್ತು. ಹಣ್ಣು ನೀಡಿ ಪತಿ ದರ್ಶನ್ ಕುಶಲೋಪರಿ ವಿಚಾರಿಸಿದರು ಎನ್ನಲಾಗಿದೆ.
ಇನ್ನೂ ಇತ್ತೀಚೆಗೆ ದರ್ಶನ್ ಗೆ ಹೈಕೋರ್ಟ್ ನೀಡಿದ್ದ ಬೇಲ್ ಕ್ಯಾನ್ಸಲ್ ಮಾಡಿರುವ ಸುಪ್ರೀಂ ಕೋರ್ಟ್ ಡಿ ಗ್ಯಾಂಗ್ ಗೆ ಜೈಲು ಹಾದಿ ತೋರಿಸಿದೆ.