ವಿಷ್ಣು ಸಮಾಧಿ ರಾತ್ರೋ ರಾತ್ರಿ ತೆರವು ಮಾಡಿದ್ದು ಬೇಸರ ತಂದಿದೆ ಎಂದು ನಟ ವಿಜಯ್ ರಾಘವೇಂದ್ರ ಹೇಳಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಮೇರು ನಟನ ಸಮಾಧಿ ರಾತ್ರೋ ರಾತ್ರಿ ತೆರವು ಮಾಡಿದ್ದು ಎಲ್ಲರಿಗೂ ಬೇಸರ ತಂದಿದೆ. ಈಗ ಆಗೋಗಿದೆ, ಅದಕ್ಕಾಗಿ ಏನು ಮಾಡಬೇಕು, ಕಾನೂನು ಬದ್ಧವಾಗಿ ಬಹಳ ದೊಡ್ಡ ಜವಾಬ್ದಾರಿ ಹೊತ್ತಿರೋರು ಹಾಗೂ ಒಳ್ಳೆಯ ಮನಸ್ಸಿರೋರು ಕೆಲಸ ಮಾಡ್ತಿದಾರೆ. ಸಿನಿಮಾ ಇಂಡಸ್ಟ್ರಿ ಬೆಳಸಿದವರು ವಿಷ್ಣುವರ್ಧನ್ ಸರ್. ಚಿತ್ರರಂಗಕ್ಕೆ ಕೊಡುಗೆ ಕೊಟ್ಟಿರುವ ಹಿರಿಯ ಕಲಾವಿದರಿಗೆ ಹೀಗಾದಾಗ ಏನು ಹೇಳಬೇಕು ಗೊತ್ತಾಗಲ್ಲ ಎಂದಿದ್ದಾರೆ.
ವಿಷ್ಣುವರ್ಧನ್ ಅವರು ಬಹಳ ಜನರಿಗೆ ಆರಾಧ್ಯದೈವ. ಇವಾಗ ಆಗೋಗಿದೆ. ನಮ್ಮ ಹಿರಿಯರು ಸೇರಿ, ಮುಂದೆ ನಿಂತು ಅದನ್ನ ಸರಿಪಡಿಸುವ ಕೆಲಸ ಮಾಡಬೇಕು ಎಂದರು. ಇನ್ನೂ ಡಾ.ವಿಷ್ಣುವರ್ಧನ್ ಅವರ ಸಮಾಧಿ ವಿಚಾರದಲ್ಲಿ ಚಿತ್ರರಂಗದ ಗಣ್ಯರು ಧ್ವನಿ ಎತ್ತಿದ್ದಾರೆ. ಇದೀಗ ನಟ ವಿಜಯ್ ರಾಘವೇಂದ್ರ ಈ ಘಟನೆಗೆ ಬೇಸರ ವ್ಯಕ್ತಪಡಿಸಿದ್ದಾರೆ.