ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅಭಿನಯದ ‘ದಿ ಡೆವಿಲ್’ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ.
ಇದ್ರೆ ನೆಮ್ದಿಯಾಗ್ ಇರ್ಬೇಕ್’ ಎಂದು ಶುರುವಾಗುವ ಈ ಹಾಡಿನ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಇದೀಗ ಸಾಂಗ್ ರಿಲೀಸ್ ಆಗಿದ್ದು, ಡಿ ಬಾಸ್ ಫ್ಯಾನ್ಸ್ ಖುಷಿಗೆ ಪಾರವೇ ಇಲ್ಲದಂತಾಗಿದೆ. ಸಖತ್ ಮಾಸ್ ಆಗಿ ಮೂಡಿಬಂದಿರುವ ‘ಇದ್ರೆ ನೆಮ್ದಿಯಾಗ್ ಇರ್ಬೇಕ್’ ಹಾಡಿನಲ್ಲಿ ನಟ ದರ್ಶನ್ ಅವರು ಸಖತ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದ ಈ ಹಾಡಿಗೆ ದೀಪಕ್ ಬ್ಲೂ ಧ್ವನಿಯಾಗಿದ್ದಾರೆ. ಸಂತು ಮಾಸ್ಟರ್ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಅನಿರುದ್ಧ್ ಶಾಸ್ತ್ರಿ ಅವರು ಸಾಹಿತ್ಯ ಬರೆದಿದ್ದಾರೆ.
ಇನ್ನೂ ಹಾಡು ಅದ್ಭುತವಾಗಿ ಇದ್ದು ದರ್ಶನ್ ಕೂಡ ಮಸ್ತ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳಿಗೆ ಇಷ್ಟವಾಗುವ ರೀತಿ ಸ್ಟೈಲೀಶ್ ಆಗಿ, ಗ್ಲಾಮರ್ ಲುಕ್ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಜ್ಜೆ ಹಾಕಿದ್ದಾರೆ. ಎಲ್ಲದಕ್ಕಿಂತ ದರ್ಶನ್ ಮತ್ತೊಮ್ಮೆ ಸಿನಿ ರಂಗದಲ್ಲಿ ಗೆಲ್ಲುವುದು ಪಕ್ಕಾ ಎನ್ನುತ್ತಿದ್ದಾರೆ ವೀಕ್ಷಕರು.