ಬೆಂಗಳೂರು: ರಾಜಕೀಯ ಬೇಳೆ ಬೇಯಿಸೋಕೆ ಈ ಧರ್ಮಸ್ಥಳ ಯಾತ್ರೆ ಮಾಡ್ತಿದ್ದಾರೆ ಅಷ್ಟೆ ಎಂದು ಬಿಜೆಪಿ ವಿರುದ್ದ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, SIT ತನಿಖೆ ಆಗ್ತಿದೆ. ಸತ್ಯ ಹೊರಗೆ ತರುತ್ತೇವೆ ಅಂತ ಸಿಎಂ, ಗೃಹ ಸಚಿವರು ಸದನದಲ್ಲಿ ಹೇಳಿದ್ದಾರೆ.
ಸತ್ಯಾಂಶ ಹೊರಗೆ ಬರೋ ಮುನ್ನ ಇವರು ಧರ್ಮಸ್ಥಳ ಚಲೋ, ಚಾಮುಂಡೇಶ್ವರಿ ಚಲೋ ಯಾಕೆ ಮಾಡ್ತೀರಾ? ಬಿಜೆಪಿ ಅವರು ಯಾವತ್ತಾದ್ರು ಒಂದು ಸಾರಿ ದೆಹಲಿ ಚಲೊ ಮಾಡಿ. ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯದ ಬಗ್ಗೆ ಚಲೋ ಮಾಡಿ. ರಾಜಕೀಯ ಬೇಳೆ ಬೇಯಿಸೋಕೆ ಈ ಧರ್ಮಸ್ಥಳ ಯಾತ್ರೆ ಮಾಡ್ತಿದ್ದಾರೆ ಅಷ್ಟೆ ಅಂತ ಕಿಡಿಕಾರಿದ್ದಾರೆ.
ಇನ್ನೂ ಧರ್ಮಸ್ಥಳ ಕೇಸ್ ನಲ್ಲಿ ಬಿಜೆಪಿ ಅವರೇ SIT ಆಗಬೇಕು, ತನಿಖೆ ಆಗಬೇಕು ಅಂತ ಹೇಳಿದ್ರು. SIT ಆದ ಮೇಲೆ ಇವರು ಯಾವುದೇ ಹೇಳಿಕೆ ಕೊಟ್ಟಿರಲಿಲ್ಲ. ಈಗ ತನಿಖೆ ನಡೆಯೋವಾಗ ಜ್ಞಾನೋದಯ ಆಗಿದೆಯೋ ಅಥವಾ ಯಾರಾದ್ರು ಒತ್ತಡ ಹಾಕಿದ್ದಾರೋ ಗೊತ್ತಿಲ್ಲ, ಒಟ್ನಲ್ಲಿ ಮಾತಾಡ್ತಿದ್ದಾರೆ. ಧಮಸ್ಥಳ ಕೇಸ್ RSS vs RSS ಜಗಳ ಅಂತ ಕಿಡಿಕಾರಿದರು.



