ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಸಾಂಪ್ರದಾಯಿಕ ಪಟ್ಟದಂಚಿನ ಸೀರೆಯ ಸೆರಗಿನ ಮೇಲೆ ಆಪರೇಶನ್ ಸಿಂದೂರ ವಿನ್ಯಾಸವನ್ನು ನೇಯ್ದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ಕೈಮಗ್ಗ ಮತ್ತು ಜವಳಿ ಇಲಾಖೆಯ ವತಿಯಿಂದ ನೇಕಾರರಿಗೆ ನೇಯ್ಗೆಯ ಉತ್ಕೃಷ್ಟತೆಗಾಗಿ ನೀಡುವ 2025ನೇ ಸಾಲಿನ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಗಜೇಂದ್ರಗಡ ಪಟ್ಟಣದ ತೇಜಪ್ಪ ಚಿನ್ನೂರ ಅವರನ್ನು ಜಿಲ್ಲಾ ಮನ್ ಕಿ ಬಾತ್ ಸಂಘಟನೆ, ಚಿನ್ಮಯ ಸಾಂಸ್ಕೃತಿಕ ಅಕಾಡೆಮಿ ಗದಗ ಹಾಗೂ ನಮ್ಮ ಲೋಕ ಚಾನೆಲ್ ವತಿಯಿಂದ ಸನ್ಮಾನಿಸಲಾಯಿತು.
Advertisement
ಈ ವೇಳೆ ಗಜೇಂದ್ರಗಡ ನೇಕಾರರ ಸಹಕಾರಿ ಸಂಘದ ಅಧ್ಯಕ್ಷ ಅಶೋಕ ವನ್ನಾಲ, ಜಿಲ್ಲಾ ಮನ್ ಕಿ ಬಾತ್ ಸಂಚಾಲಕ ರಾಚಯ್ಯ ಹೊಸಮಠ, ಚಿನ್ಮಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಮೌನೇಶ ಚಿ. ಬಡಿಗೇರ(ನರೇಗಲ್ಲ) ಸೇರಿದಂತೆ ಇತರರಿದ್ದರು.


