ಚಿಕ್ಕಮಗಳೂರು:- ಜಿಲ್ಲೆಯ ಶೃಂಗೇರಿ ತಾಲೂಕಿನ ಗುಲಗಂಜಿ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ತುಂಗಾ ನದಿಯ ಉಪನದಿಗೆ ಬಿದ್ದ ಘಟನೆ ಜರುಗಿದೆ.
Advertisement
ಕಾರ್ಕಳದಿಂದ ಶೃಂಗೇರಿಗೆ ಆಗಮಿಸುತ್ತಿದ್ದ ಕಾರು ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ಉಪನದಿಗೆ ಬಿದ್ದಿದೆ. ನಾಲ್ವರು ಕಾರಿನಲ್ಲಿ ರಾತ್ರಿ ಕಾರ್ಕಳದಿಂದ ಶೃಂಗೇರಿಗೆ ಆಗಮಿಸುತ್ತಿದ್ದ ವೇಳೆ ಉಪನದಿಗಿದ್ದ ತಡೆಗೋಡೆ ಮುರಿದು ಕಾರು ನದಿಗೆ ಬಿದ್ದಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.
ಗುಲಗಂಜಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 169ನಲ್ಲಿ ಘಟನೆ ಸಂಭವಿಸಿದೆ.


