ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ನಾರಾಯಣಪುರ ಗ್ರಾಮದಲ್ಲಿ ನೂತನ ಡಿಜಿಟಲ್ ಗ್ರಂಥಾಲಯವನ್ನು ರೋಣ ಶಾಸಕ ಜಿ.ಎಸ್. ಪಾಟೀಲ ಶುಕ್ರವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮನುಷ್ಯನಿಗೆ ಜೀವಿಸಲು ಅನ್ನ, ನೀರು, ಗಾಳಿ ಹೇಗೆ ಮುಖ್ಯವೋ ಹಾಗೆಯೇ ಜ್ಞಾನವೂ ಸಹ ಮುಖ್ಯ. ಈ ಜ್ಞಾನವು ಓದುವುದರಿಂದ ಬರುತ್ತದೆ. ಅದಕ್ಕೆಂದೇ ನಮ್ಮ ಜಿಲ್ಲೆಯಲ್ಲಿ 92 ನೂತನ ಗ್ರಾಮ ಗ್ರಂಥಾಲಯಗಳನ್ನು ತೆರೆಯಲು ನಮ್ಮ ಸರಕಾರ ನಿರ್ಧರಿಸಿದೆ. ಈ ಗ್ರಂಥಾಲಯದ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಸಕರು ಪ್ರಾಥಮಿಕ ಶಾಲಾ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡ ಅಕ್ಷರ ದಾಸೋಹದ ಅಡುಗೆ ಕೋಣೆಯನ್ನು ಉದ್ಘಾಟಿಸಿದರು. ಈ ಗ್ರಾಮಕ್ಕೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದ ಶಾಸಕರು, ಸಿಸಿ ರಸ್ತೆ ಕಾಮಗಾರಿಯನ್ನು ಶೀಘ್ರದಲ್ಲಿಯೇ ಪ್ರಾರಂಭಿಸಲಾಗುವದಾಗಿ ಹೇಳಿದರು.
ತಾ.ಪಂ. ಮಾಜಿ ಅಧ್ಯಕ್ಷ ವಿದ್ಯಾಧರ ದೊಡ್ಡಮನಿ, ಗ್ರಾ.ಪಂ. ಅಧ್ಯಕ್ಷೆ ತನುಜಾ ಹಾದಿಮನಿ, ಸದಸ್ಯ ರಾಜೇಸಾಬ್ ನದಾಫ್, ಎಸ್‌ಡಿಎಂಸಿ ಅಧ್ಯಕ್ಷ ಮುತ್ತಪ್ಪ ಹಂಚಿನಾಳ, ಶೋಭಾ ಗದಗಿನಮಠ, ಯಲ್ಲಪ್ಪ ಗುರಿಕಾರ, ವಿ.ಬಿ. ಸೋಮನಕಟ್ಟಿಮಠ, ಪ್ರಕಾಶ ಮುಧೋಳ, ಮಾರುತಿ ಪೂಜಾರ, ಈಶ್ವರಗೌಡ ಸೂರಪ್ಪಗೌಡ್ರ, ಪಿಡಿಒ ಸಂತೋಷಕುಮಾರ ಹೂಗಾರ, ಗ್ರಂಥಪಾಲಕ ಸುರೇಶ್ ಪತ್ತಾರ, ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಮಧ್ಯಮನಿ, ಶಂಕರ ಹಡಗಲಿ, ಮುಖ್ಯ ಶಿಕ್ಷಕಿ ಜೆ.ಬಿ. ರಿಸಲ್ದಾರ, ಗ್ರಾಮದ ಗಣ್ಯರು ಉಪಸ್ಥಿತರಿದ್ದರು.



