ಉತ್ತರಪ್ರದೇಶ: ಸ್ವಾವಲಂಬಿ ಭಾರತ ನಿರ್ಮಾಣವೇ ನಮ್ಮ ಸಂಕಲ್ಪ ಮತ್ತು ಮಂತ್ರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಉತ್ತರಪ್ರದೇಶದಲ್ಲಿ ಮಾತನಾಡಿದ ಅವರು, ಅನಿಶ್ಚಿತತೆಯ ಸಂದರ್ಭಗಳು ನಮಗೆ ಹಿನ್ನಡೆ ತರುವುದಿಲ್ಲ.
ಅಂಥ ಪರಿಸ್ಥಿತಿಯಲ್ಲೂ ಹೊಸ ಮಾರ್ಗ ಕಂಡುಕೊಳ್ಳಲು ಯತ್ನಿಸುತ್ತೇವೆ. ಮುಂಬರುವ ದಶಕಗಳ ಬೆಳವಣಿಗೆಗಾಗಿ ಈಗ ತಳಹದಿ ಬಲಪಡಿಸಲಾಗುತ್ತಿದೆ. ಸ್ವಾವಲಂಬಿ ಭಾರತ್ ನಿರ್ಮಾಣವೇ ನಮ್ಮ ಸಂಕಲ್ಪ ಮತ್ತು ಮಂತ್ರ ಎಂದು ತಿಳಿಸಿದರು.
ಬೇರೆಯವರ ಮೇಲೆ ಅವಲಂಬಿತವಾಗಿರುವುದಕ್ಕಿಂತ ಹೆಚ್ಚಿನ ಅಸಹಾಯಕತೆ ಮತ್ತೊಂದಿಲ್ಲ. ಒಂದು ದೇಶವು ಬೇರೆಯವರ ಮೇಲೆ ಹೆಚ್ಚು ಅವಲಂಬಿತವಾದಷ್ಟೂ ಅದರ ಪ್ರಗತಿ ಕುಂಠಿತಗೊಳ್ಳುತ್ತಾ ಹೋಗುತ್ತದೆ’ ಎಂದು ನರೇಂದ್ರ ಮೋದಿ ವಿಶ್ಲೇಷಿಸಿದರು.



