HomeGadag Newsಖರೀದಿ ಸಂಸ್ಥೆಗಳ ದುರುಪಯೋಗವಾಗದಿರಲಿ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್

ಖರೀದಿ ಸಂಸ್ಥೆಗಳ ದುರುಪಯೋಗವಾಗದಿರಲಿ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: 2025-26ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ಎಫ್.ಎ.ಕ್ಯೂ ಗುಣಮಟ್ಟದ ಹೆಸರುಕಾಳು ಹುಟ್ಟುವಳಿಯನ್ನು ಖರೀದಿಸಲು ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ನೋಂದಣಿ ಪ್ರಕ್ರಿಯೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾಭವನದಲ್ಲಿ 2025-26ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಹೆಸರು ಹುಟ್ಟುವಳಿ ಖರೀದಿಸುವ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ಪ್ರತಿ ರೈತರಿಂದ ಪ್ರತಿ ಎಕರೆಗೆ 3 ಕ್ವಿಂಟಲ್‌ನಂತೆ ಗರಿಷ್ಠ 15 ಕ್ವಿಂಟಲ್ ಎಫ್.ಎ.ಕ್ಯೂ ಗುಣಮಟ್ಟದ ಹೆಸರು ಖರೀದಿಸಲು ಹಾಗೂ ಹೆಸರು ಖರೀದಿ ಕೇಂದ್ರಗಳಲ್ಲಿ ರೈತರ ಹೆಸರಿನಲ್ಲಿ ವರ್ತಕರು ತರುವ ಹೆಸರುಕಾಳು ಉತ್ಪನ್ನವನ್ನು ಖರೀದಿಸದಂತೆ ಹಾಗೂ ಖರೀದಿ ಸಂಸ್ಥೆಗಳು ಯಾವುದೇ ರೀತಿಯ ದುರುಪಯೋಗವಾಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಸರ್ಕಾರದ ಮಾನದಂಡಗಳನ್ವಯ ಎಫ್.ಎ.ಕ್ಯೂ ಗುಣಮಟ್ಟವನ್ನು ದೃಢೀಕರಿಸಲು ಕ್ರಮ ವಹಿಸಬೇಕು. ಹೆಸರುಕಾಳಿನ ಎಫ್.ಎ.ಕ್ಯೂ ಪ್ರಕ್ರಿಯೆಯಲ್ಲಿ ಗುಣಮಟ್ಟ ಪರಿಶೀಲನೆಗಾಗಿ ಲಭ್ಯವಿರುವ ಅಧಿಕಾರಿ/ಸಿಬ್ಬಂದಿಗಳನ್ನು ಬಳಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಸರ್ಕಾರದ ಆದೇಶದನ್ವಯ ರಾಜ್ಯದಲ್ಲಿ ನಾಫೆಡ್ ಹಾಗೂ ಎನ್.ಸಿ.ಸಿ.ಎಫ್. (ಎನ್‌ಸಿಸಿಎಫ್) ಸಂಸ್ಥೆಯನ್ನು ಕೇಂದ್ರ ಸರ್ಕಾರದ ಖರೀದಿ ಸಂಸ್ಥೆಯನ್ನಾಗಿ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ಬೆಂಗಳೂರು ಮತ್ತು ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ ಕಲಬುರಗಿ ಸಂಸ್ಥೆಗಳನ್ನು ರಾಜ್ಯದ ವತಿಯಿಂದ ಖರೀದಿ ಸಂಸ್ಥೆಯನ್ನಾಗಿ ಗುರುತಿಸಲಾಗಿದೆ. ಗದಗ ಜಿಲ್ಲೆಯಲ್ಲಿ ಗದಗ ಹಾಗೂ ನರಗುಂದ ಮಾರ್ಕ್ಫೆಡ್ ಸಂಸ್ಥೆಯ ಶಾಖೆಗಳಿದ್ದು ಜಿಲ್ಲೆಯ ತಾಲೂಕುಗಳ ವ್ಯಾಪ್ತಿಯಲ್ಲಿ ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗುವಂತೆ ಎನ್.ಸಿ.ಸಿ.ಎಫ್. (ಎನ್‌ಸಿಸಿಎಫ್) ಮಾರ್ಗಸೂಚಿಯನ್ವಯ ಹಾಗೂ ತಾಂತ್ರಿಕ ಮತ್ತು ವೈಜ್ಞಾನಿಕ ಸೌಲಭ್ಯದಿಂದ ಕೂಡಿರುವ ಸದೃಢ PACS/FPOs/ಕೃಷಿ ಉತ್ಪನ್ನ ಪ್ರೊಸೆಸಿಂಗ್ ಸೊಸೈಟಿಗಳು ಸಂಸ್ಥೆಗಳ ಮುಖಾಂತರ ಒಡಂಬಡಿಕೆ ಮಾಡಿಕೊಂಡು ಖರೀದಿ ಕೇಂದ್ರಗಳನ್ನು ತೆರೆಯಲು ಎರಡು ಖರೀದಿ ಏಜೆನ್ಸಿಯ ಶಾಖೆಗಳಿಗೆ ಸೂಚಿಸಲಾಯಿತು.

ಖರೀದಿ ಕೇಂದ್ರಗಳು:
ಗದಗ ತಾಲೂಕು (20) – PACS: ಮುಳಗುಂದ, ಬಳಗಾನೂರ, ಹರ್ಲಾಪುರ, ಶಿರೋಳ, ಕೋಟುಮಚಗಿ-1, ಹೊಂಬಳ, ನೀರಲಗಿ, ಕೋಟುಮಚಗಿ-2, ಸೊರಟೂರ, ಕದಡಿ, ಲಿಂಗದಾಳ, ಕಣಗಿನಹಾಳ, ಕುರ್ತಕೋಟಿ, ಬಿಂಕದಕಟ್ಟಿ, ನಾಗಾವಿ, ನಾಗಾವಿ ನಂ.2
FPO: ಶ್ರೀ ಪ್ರಭುಸ್ವಾಮಿ ಹೊಂಬಳ, ಶ್ರಮಜೀವಿ ಹಿರೇಹಂದಿಗೋಳ, ಟಿಎಪಿಸಿಎಂಎಸ್ ಗದಗ, ಗದಗ ಕೋ-ಆಪ್ ಕಾಟನ್ ಸೇಲ್ ಸೊಸೈಟಿ, ಗದಗ.

ಶಿರಹಟ್ಟಿ (3): ಪಿಎಸಿಎಸ್ ಶಿರಹಟ್ಟಿ, ಟಿಎಪಿಸಿಎಂಎಸ್ ಶಿರಹಟ್ಟಿ, ಎಫ್.ಪಿ.ಓ ಬೆಳ್ಳಟ್ಟಿ.

ಲಕ್ಷ್ಮೇಶ್ವರ (3): ಪಿಎಸಿಎಸ್ ಯಳವತ್ತಿ, ಪಿಎಸಿಎಸ್ ಅಡರಕಟ್ಟಿ, ಟಿಎಪಿಸಿಎಂಎಸ್ ಲಕ್ಷ್ಮೇಶ್ವರ.

ಮುಂಡರಗಿ (5): ಪಿಎಸಿಎಸ್ ಆಲೂರ, ಪೇಠಾಲೂರ, ಬರದೂರ, ಶಿರೂರ, ಟಿಎಪಿಸಿಎಂಎಸ್ ಮುಂಡರಗಿ.

ನರಗುಂದ (9): ಪಿಎಸಿಎಸ್ ಚಿಕ್ಕನರಗುಂದ, ಸುರಕೋಡ, ಸಂಕದಾಳ, ಶಿರೋಳ, ಕೊಣ್ಣೂರ, ಹಿರೇಕೊಪ್ಪ, ಜಗಾಪೂರ, ಖಾನಾಪೂರ, ಗಂಗಾಪೂರ, ಟಿಎಪಿಸಿಎಂಎಸ್ ನರಗುಂದ.

ರೋಣ (15): ಪಿಎಸಿಎಸ್: ಹೊಸಳ್ಳಿ, ಮಲ್ಲಾಪೂರ, ರೋಣ-1, ರೋಣ-2, ಜಕ್ಕಲಿ, ಯಾವಗಲ್, ಕೌಜಗೇರಿ, ಬೆಳವಣಕಿ, ಸವಡಿ, ನಿಡಗುಂದಿ, ಅಬ್ಬಿಗೇರಿ, ಹೊಳೆ ಆಲೂರ, ಯಾ.ಸ.ಹಡಗಲಿ, ಟಿಎಪಿಸಿಎಂಎಸ್ ರೋಣ, ಎಫ್.ಪಿ.ಓ ಸವಡಿ.

ಗಜೇಂದ್ರಗಡ (2): ಟಿಎಪಿಸಿಎಂಎಸ್ ನರಗಲ್, ಟಿಎಪಿಸಿಎಂಎಸ್ ಗಜೇಂದ್ರಗಡ.

ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕರು ಮಾತನಾಡಿ, ಎಫ್.ಎ.ಕ್ಯೂ ಗುಣಮಟ್ಟದ ಹೆಸರು ಉತ್ಪನ್ನವನ್ನು ಪ್ರತಿ ಕ್ವಿಂಟಾಲ್‌ಗೆ ರೂ. 8768 ನಿಗದಿಪಡಿಸಲಾಗಿದೆ. ಕೇಂದ್ರ ಸರ್ಕಾರದ ಬೆಂಬಲ ಬೆಲೆ ಮಾರ್ಗಸೂಚಿಗಳನ್ವಯ ಸದರಿ ಆದೇಶ ಹೊರಡಿಸಿದ ದಿನಾಂಕದಿಂದ ರೈತರ ನೋಂದಣಿ ಕಾಲಾವಧಿಯನ್ನು 80 ದಿನಗಳವರೆಗೆ ಹಾಗೂ ಖರೀದಿ ಅವಧಿಯನ್ನು 90 ದಿನಗಳವರೆಗೆ ನಿಗದಿಪಡಿಸಲಾಗಿದೆ. ನೋಂದಣಿ ಕಾರ್ಯದ ಜೊತೆಗೆ ಖರೀದಿ ಪ್ರಕ್ರಿಯೆಯನ್ನು ಸಹ ಪ್ರಾರಂಭಿಸಿ ರಾಜ್ಯದಲ್ಲಿ ಮಾರ್ಕ್ಫೆಡ್ ಸಂಸ್ಥೆಯ ಮೂಲಕ ಖರೀದಿಸಲು ಆದೇಶಿಸಲಾಗಿದೆ ಎಂದು ತಿಳಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!