ವಿಜಯಸಾಕ್ಷಿ ಸುದ್ದಿ, ನವದೆಹಲಿ
Advertisement
ದೆಹಲಿ ಪ್ರವಾಸ ಮುಗಿಸಿ ಬೆಂಗಳೂರಿನತ್ತ ಹಿಂದಿರುಗಲು ಏರ್‌ಪೋರ್ಟ್ ನತ್ತ
ಪ್ರಯಾಣಿಸುತ್ತಿದ್ದ ಸಿಎಂ ಬಿ.ಎಸ್. ಯಡಿಯೂರಪ್ಪಗೆ ಗೃಹ ಸಚಿವ ಅಮಿತ್ ಷಾ ದಿಢೀರ್ ಬುಲಾವ್ ನೀಡಿದ್ದಾರೆ.
ನಿನ್ನೆ ಸಂಜೆ ಪ್ರಧಾನಿ ಮೋದಿ ಭೇಟಿಯಾಗಿದ್ದ ಸಿಎಂ ಯಡಿಯೂರಪ್ಪ, ಇಂದು ಬೆಳಿಗ್ಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಭೇಟಿಯಾಗಿ ಬಳಿಕ ಅಮಿತ್ ಷಾ ಭೇಟಿಗೆ ನಿರ್ಧರಿಸಿದ್ದರು. ಆದರೆ ಕಾಲಾವಕಾಶ ಸಾಧ್ಯವಾಗದೇ ಬೆಂಗಳೂರಿಗೆ ಹಿಂದಿರುಗಲು ಏರ್ಪೋರ್ಟ್ ಗೆ ಬಂದಿದ್ದರು. ಅಷ್ಟರಲ್ಲಿ ಮತ್ತೆ ಅಮಿತ್ ಷಾ ಸಿಎಂ ಯಡಿಯೂರಪ್ಪನವರಿಗೆ ಕರೆ ಮಾಡಿ ಬುಲಾವ್ ನೀಡಿದ್ದಾರೆ.
ಏರ್‌ಪೋರ್ಟ್ ನಿಂದ ವಾಪಸ್ ಅಮಿತ್ ಷಾ ನಿವಾಸಕ್ಕೆ ತೆರಳಿರುವ ಯಡಿಯೂರಪ್ಪ ಷಾ ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ.