ಬಾಗಲಕೋಟ :– ಪುತ್ರನ ಜೊತೆ ಬೈಕ್ ಮೇಲೆ ಸಮೀಕ್ಷೆಗೆ ಹೋಗಿದ್ದ ಶಿಕ್ಷಕಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಬೋಡನಾಯ್ಕದಿನ್ನಿ ಕ್ರಾಸ್ ಬಳಿ ಜರುಗಿದೆ.
Advertisement
ದಾನಮ್ಮ ನಂದರಗಿ(55)ಬೈಕ್ ನಿಂದ ಕೆಳಗೆ ಬಿದ್ದು ಮೃತಪಟ್ಟ ಶಿಕ್ಷಕಿ. ಸಾಮಾಜಿಕ,ಶೈಕ್ಷಣಿಕ ಕಾರ್ಯ ಸಮೀಕ್ಷೆ ಮುಗಿಸಿ ತಮ್ಮ ಬಾಗಲಕೋಟೆ ನಿವಾಸಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ಜರುಗಿದೆ. ಮೃತ ಶಿಕ್ಷಕಿಯು, ನಗರದ ಆಶ್ರಯ ಕಾಲೊನಿಯ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಎನ್ನಲಾಗಿದೆ. ಘಟನೆ ಬಳಿಕ ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಪೋಲಿಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.